Webdunia - Bharat's app for daily news and videos

Install App

ಬೆಂಗಳೂರಿನಲ್ಲಿ ಶಂಕಿತ ಉಗ್ರ ಅರೆಸ್ಟ್..!

Webdunia
ಶನಿವಾರ, 11 ಫೆಬ್ರವರಿ 2023 (19:05 IST)
ಅವನೊಬ್ಬ ಹೇಳಿಕೊಳ್ಳೋದಕ್ಕೆ ಸಾಫ್ಟ್ ವೇರ್ ಉದ್ಯೋಗಿ.. ಆದ್ರೆ ಮಾಡ್ತಾಯಿದ್ದದ್ದು ಮಾತ್ರ ದೇಶ ದ್ರೋಹದ ಕೆಲಸ‌‌.. ಈತನ ಚಲನವಲನ ವನ್ನು ಕರೆಕ್ಟ್ ಆಗಿ ವಾಚ್ ಮಾಡ್ತಾಯಿದ್ದ ತನಿಖಾ ಸಂಸ್ಥೆಗಳು ಇದೀಗ ಆತನನ್ನು ಬಲೆಗೆ ಬೀಳಿಸಿಕೊಂಡಿದ್ದಾರೆ.ಬೆಂಗಳೂರಿನ ಥಣಿಸಂದ್ರದಲ್ಲಿ ನಮ್ಮ ನಡುವೆಯೇ ಉಗ್ರನೊಬ್ಬ ಇದ್ದ ಅನ್ನೋ ವಿಚಾರವೇ ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು.ಮ ಮುಖದಲ್ಲಿಯು ಆತಂಕ, ಗಾಬರಿ. ಎಲ್ಲಾರು ಸಹ ಆ ಒಂದು ಮನೆಯನ್ನೆ ನೋಡ್ತಾಯಿದ್ದಾರೆ.

 ಓರ್ವ ಶಂಕಿತ ಉಗ್ರ.. ಉತ್ತರ ಪ್ರದೇಶ ಮೂಲದ ಆರೀಫ್ ಅಲಿಯಾಸ್ ಮಹಮದ್ ಆರಿಫ್ ಕಳೆದ ಎರಡು‌ವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ.. ಮಾನ್ಯತ ಟೆಕ್ ಪಾರ್ಕ್ ನಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಕೆಲಸ ಮಾಡ್ತಾಯಿದ್ದ.. ತಣಿಸಂದ್ರದ  ಮಂಜುನಾಥ್ ನಗರದಲ್ಲಿ ತನ್ನ ಹೆಂಡತಿ ಮತ್ತು ಇಬ್ಪರು ಮಕ್ಕಳ ಜೊತೆ ವಾಸವಿದ್ದ.. ಆದ್ರೆ ಈತನ ಟಾರ್ಗೆಟ್ ಬೇರೆಯೇ‌ ಇತ್ತು.. ಹೌದು.. ಐಎಸ್ ಡಿ ಹಾಗು ಕೇಂದ್ರ ಸಂಸ್ಥೆಗಳ ಕಾರ್ಯಾಚರಣೆ ನಡೆಸಿ ಇಂದು ಈತನ ಮನೆಗೆ ದಾಳಿ ಮಾಡಿದ್ದಾರೆ.. ಈ ಆರೀಫ್
ಟೆಲಿಗ್ರಾಮ್ ನಲ್ಲಿ ಆಲ್ ಖೈದಾ ಗ್ರೂಪ್ ಗಳಲ್ಲಿ ಸಕ್ರಿಯನಾಗಿದ್ದನಂತೆ.. ಇಷ್ಟೇ ಅಲ್ಲದೇ ಸಿರಿಯಾ ಮತ್ತು ಇರಾನ್ ಮೂಲಕ ತೆರಳಲು ಈ ಹಿಂದೆ ಯತ್ನಿಸಿದ್ದ ಆದ್ರೆ ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ  ಹೋಗಲು ಸಾದ್ಯವಾಗಿರಲಿಲ್ಲಾ.ಈಗ ಮಾರ್ಚ್ ನಲ್ಲಿ ಮತ್ತೆ ಇರಾನ್ ಮೂಲಕ ಸಿರಿಯಾ ಹಾಗು ಅಫ್ಘಾನ್ ಗೆ ತರಳಲು ಪ್ಲಾನ್ ಮಾಡಿ ಫ್ಲೈಟ್ ಟಿಕೆಟ್ ಕೂಡ ರೆಡಿಮಾಡಿಕೊಂಡಿದ್ದ.

ಈ ಹಿಂದೆ ಐಸಿಸ್  ಬಗ್ಗೆ  ಒಲವನ್ನು ಹೊಂದಿದ್ದ ಆರೀಫ್ ತದನಂತರದಲ್ಲಿ 
 ಆಫ್ಘಾನಿಸ್ತಾನದದಲ್ಲಿ ಆಲ್ ಖೈದಾ  ತಾಲಿಬಾನ್ ವಶಕ್ಕೆ ಪಡೆದ ನಂತರ ತನ್ನ ಬೆಂಬಲವನ್ನು ತಾಲಿಬಾನ್ ಗೆ ವಾಲಿಸಿದ್ದ‌..
ತಾಲಿಬಾನ್ ಪವರ್ ಫುಲ್ ಆಗಿದ್ದ ಬಳಿಕ ಈತನ ಒಲವು ಆಲ್ ಖೈದಾ ಮತ್ತು ತಾಲಿಬಾನ್ ಕಡೆಗೆ ಹೋಗಿತ್ತು., ಇದಕ್ಕೆ ಪೂರಕವಾಗಿ ಈ ಹಿಂದೆ ಟ್ವಿಟರ್ ನಲ್ಲಿ ಉಗ್ರ ಸಂಘಟನೆ ಪರವಾಗಿ ಫೇಕ್ ಅಕೌಂಟ್ ಕ್ರಿಯೇಟ್‌ ಮಾಡಿ ಅದರಲ್ಲಿ ಪೋಸ್ಟ್ ಮಾಡಿದ್ದ ಅಂತಲು ಸಹ ಹೇಳಲಾಗುತ್ತಿದೆ.. ಅದ್ರೆ  ಟ್ವಿಟರ್  ಈತನ ಫೇಕ್ ಅಕೌಂಟ್ ಗಳನ್ನು  ಬ್ಲಾಕ್ ಮಾಡಿತ್ತು, ಆಗಲೇ ಎಚ್ಚಿತ್ತುಕೊಂಡ ಈತ ಟ್ವಿಟರ್ ಯೂಸ್ ಮಾಡೋದನ್ನೆ ಬಿಟ್ಟಿದ್ದನಂತೆ.. ಇನ್ನು ಪಕ್ಕಾ ಪ್ಲ್ಯಾನ್ ಮಾಡಿಕೊಂಡಿದ್ದ ಈ ಆರೀಫ್ ಯಾವುದೇ ತನ್ನ ದಾಖಲಾತಿ ಕೊಡದೇ ಬರಿ ಅಗ್ರಿಮೆಂಟ್ ಮಾಡಿಕೊಂಡು ಮನೆಗೆ ಸೇರಿಕೊಂಡಿದ್ದ.. ಆದ್ರೆ ಮುಂದಿನ ತಿಂಗಳು ಅಫ್ಘಾನ್ ಗೆ ಹೋಗಬೇಕೆಂದು ಪ್ಲ್ಯಾನ್ ಮಾಡಿದ್ದ ಈತ ಮನೆ ಕಾಲಿ ಮಾಡ್ತೀವಿ ಅಂತ  ಓನರ್ ಜೊತೆ ಫೈನಲ್ ಸೆಟಲ್ ಮೆಂಟ್ ಮಾಡಿಕೊಂಡಿದ್ದ. ಕಳೆದ 2.5 ವರ್ಷಗಳಿಂದ‌ ವಾಸವಿದ್ದ‌ ಆರೀಫ್, ಈ ಹಿಂದೆ ಮನೆಗೆ ಬರಬೇಕಾದ್ರೆ  50 ಸಾವಿರ ಅಡ್ವಾನ್ಸ್ ಕೊಟ್ಟಿದ್ದಹೀಗಾಗಿ ಓನರ್ ನಿನ್ನೆ‌ ಪೇಯಿಂಟ್ ಖರ್ಚು ಎಲ್ಲಾ ಕಳೆದು 35 ಸಾವಿರ ಕೊಟ್ಟಿದ್ದರು‌‌, ಹೀಗಾಗಿ ನಾಳೆ 12 ನೇ ತಾರೀಖಿನಂದು ಮನೆ ಖಾಲಿ ಮಾಡ್ತೀವಿ ಅಂತ ಹೇಳಿದ್ದ ಎಂದು ತಿಳಿದು ಬಂದಿದೆ. ಇನ್ನು ಉಗ್ರನ ಬಂಧನ ಕುರಿತು ಗೃಹಸಚಿವ ಆರಗ ಜ್ಞಾನೇಂದ್ರ ಅಧಿಕಾರಿಗಳಿಗೆ ಅಭಿನಂದನೆ ಸೂಚಿಸಿದ್ದಾರೆ.

ಸದ್ಯ ಆರೀಫ್ ಮನೆಯಲ್ಲಿ ಸಿಕ್ಕಂತಹ ಮೊಬೈಲ್, ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ಕೆಲ ದಾಖಲಾತಿಗಳು,  ಸೇರಿದಂತೆ ಅನೇಕ ಎವಿಡೆನ್ಸ್ ಗಳನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.. ಇದೀಗ ಆರೀಫ್ ನನ್ನು ಸಹ‌ ವಶಕ್ಕೆ ಪಡೆದಿದ್ದು ಇದೀಗ ದೊಮ್ಮಲೂರಿನಲ್ಲಿರುವ ಎನ್.ಐ.ಎ ಕಚೇರಿಗೆ ಕರೆದೋಯ್ದು ತನಿಖೆಯನ್ನು ಸಹ ಮುಂದುವರಿಸಿದ್ದಾರೆ.. ಒಟ್ಟಿನಲ್ಲಿ ಇದೇ ದೇಶದ ಅನ್ನ ತಿಂದು ಇದೇ ದೇಶಕ್ಕೆ ದ್ರೋಹ ಬಗೆಯೋದು ಅದೆಷ್ಟು ಸರಿ‌ ಅನ್ನೋದೆ ಪ್ರಶ್ನೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Hit And Run Case: ಅಮೆರಿಕದಲ್ಲಿ ಮುಂದಿನ ತಿಂಗಳು ಪದವಿ ಪಡೆಯಬೇಕಿದ್ದ ಗುಂಟೂರು ವಿದ್ಯಾರ್ಥಿನಿ ಸಾವು

ರಸ್ತೆ ಮಧ್ಯೆಯಲ್ಲಿ ಚೇರ್ ಮೇಲೆ ಕುಳಿತು ರೀಲ್ಸ್ ಹುಚ್ಚಾಟ ಮಾಡಿದವ ಅರೆಸ್ಟ್‌

Rahul Gandhi: ರೋಹಿತ್ ವೇಮುಲಾ ಕಾಯಿದೆ ಜಾರಿಗೊಳಿಸಲು ರಾಹುಲ್ ಗಾಂಧಿ ಪತ್ರ: ಯೆಸ್ ಬಾಸ್ ಎಂದ ಸಿದ್ದರಾಮಯ್ಯ

50 ಕೋಟಿ ಅಲ್ಲ ಲಕ್ಷಕ್ಕೂ ಬೆಲೆ ಬಾಳಲ್ಲ ಸತೀಶ್‌ ಖರೀದಿಸಿದ ನಾಯಿ, ED ದಾಳಿಯಲ್ಲಿ ಅಸಲಿಯತ್ತು ಬಯಲು

60ನೇ ವರ್ಷದಲ್ಲಿ ಹಸೆಮಣೆಯೇರಿದ ಪಶ್ಚಿಮ ಬಂಗಾಳದ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ದಿಲೀಪ್‌ ಘೋಷ್‌

ಮುಂದಿನ ಸುದ್ದಿ
Show comments