ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಬಹಳ ಜಾಣೆ, ಎರಡೇ ತಿಂಗಳಲ್ಲಿ ಕನ್ನಡ ಕಲಿತರಂತೆ

Krishnaveni K
ಸೋಮವಾರ, 23 ಜೂನ್ 2025 (12:35 IST)
Photo Credit: Instagram
ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಪತ್ನಿ, ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಬಹಳ ಜಾಣೆ. ಎರಡೇ ತಿಂಗಳಲ್ಲಿ ಕನ್ನಡ ಕಲಿತರಂತೆ. ಹೀಗಂತ ಸ್ವತಃ ಪತಿ ತೇಜಸ್ವಿ ಸೂರ್ಯ ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕಳೆದ ಮಾರ್ಚ್ ನಲ್ಲಿ ತೇಜಸ್ವಿ ಸೂರ್ಯ ಮತ್ತು ಗಾಯಕಿ ಶಿವಶ್ರೀ ಮದುವೆ ಸಾಂಪ್ರದಾಯಿಕವಾಗಿ ನೆರವೇರಿತ್ತು. ಬಳಿಕ ಜನರಿಗಾಗಿ ಅರಮನೆ ಮೈದಾನದಲ್ಲಿ ತೇಜಸ್ವಿ ಸೂರ್ಯ ಬೃಹತ್ ಆರತಕ್ಷತೆಯನ್ನೂ ಹಮ್ಮಿಕೊಂಡಿದ್ದರು. ಇಬ್ಬರ ಜೋಡಿ ಮುದ್ದಾಗಿದೆ ಎಂದು ಜನ ಮೆಚ್ಚಿಕೊಂಡಿದ್ದೂ ಆಗಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ ಗಾಯಕಿ, ನೃತ್ಯಪಟುವಾಗಿರುವ ಶಿವಶ್ರೀ ಮೂಲತಃ ಚೆನ್ನೈಯವರು. ಹೀಗಾಗಿ ಅವರ ಮೂಲ ಭಾಷೆ ತಮಿಳು. ಅವರಿಗೆ ಕನ್ನಡ ಬರುತ್ತಿರಲಿಲ್ಲ. ಆದರೆ ಈಗ ಮದುವೆಯಾದ ಎರಡೇ ತಿಂಗಳಿಗೆ ಕನ್ನಡ ಕಲಿತಿದ್ದಾರಂತೆ. ಹಾಗಿದ್ದರೂ ಮಾಧ್ಯಮ ಸಂದರ್ಶನದಲ್ಲಿ ಕ್ಷಮಿಸಿ ನನಗೆ ತುಂಬಾ ಮಾತನಾಡುವಷ್ಟು ಕನ್ನಡ ಗೊತ್ತಿಲ್ಲ ಎಂದು ಕನ್ನಡದಲ್ಲೇ ನಿರ್ಗಳವಾಗಿ ಮಾತನಾಡಿದ್ದಾರೆ.

ಪತ್ನಿಯ ಕನ್ನಡ ಬಗ್ಗೆ ಮಾತನಾಡಿರುವ ತೇಜಸ್ವಿ ಸೂರ್ಯ ಮದುವೆಗೂ ಮೊದಲು ಆಕೆಗೆ ನಾನು ಕನ್ನಡ ಕಲಿಯಬೇಕು ಎಂದಿದ್ದೆ. ಮದುವೆಯಾದ ಎರಡೇ ತಿಂಗಳಲ್ಲಿ ಕನ್ನಡ ಕಲಿತಿದ್ದಾಳೆ. ನಮ್ಮ ಅಪ್ಪ-ಅಮ್ಮ ಎಲ್ಲರಿಂದಾಗಿ ಕನ್ನಡ ಕಲಿತಿದ್ದಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅವಳಿಗೆ ಕನ್ನಡದ ಮೇಲೆ ಗೌರವವಿದೆ, ಕಲಿಯುವ ಉತ್ಸಾಹವಿತ್ತು. ಹಾಗಾಗಿ ಕಲಿತಿದ್ದಾಳೆ ಎಂದಿದ್ದಾರೆ. ಇನ್ನು, ಇದಕ್ಕೆ ಅನೇಕ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಎರಡೇ ತಿಂಗಳಲ್ಲಿ ಕನ್ನಡ ಕಲಿತು ಇಷ್ಟರಮಟ್ಟಿಗೆ ಮಾತನಾಡುವುದು ನಿಜಕ್ಕೂ ಗ್ರೇಟ್ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ರೇಕ್ ಫಾಸ್ಟ್ ಮುಗಿಸಿ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಹಳಸಿದ ಸಂಬಂಧಕ್ಕೆ ತೇಪೆ ಹಾಕಲು ಬ್ರೇಕ್ ಫಾಸ್ಟ್ ಮೀಟಿಂಗ್: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ತಂದ್ರೂ ಎಲ್ರೂ ಮೋದಿ ಮೋದಿ ಅಂತಾರೆ: ಸಿದ್ದರಾಮಯ್ಯ ಬೇಸರ

ಮುಂದಿನ ಸುದ್ದಿ
Show comments