Webdunia - Bharat's app for daily news and videos

Install App

ವಂಚಕ ಪತ್ನಿಯ ಅನೈತಿಕ ಸಂಬಂಧ ಬಯಲು ಮಾಡಿದ ಪತಿಯಿಂದ ವಿಚ್ಛೇದನ

Webdunia
ಭಾನುವಾರ, 8 ಮೇ 2016 (16:59 IST)
31 ವರ್ಷ ವಯಸ್ಸಿನ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ತಮ್ಮ ಪತ್ನಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನ್ನು ಮನಗಂಡು ಪತ್ನಿಗೆ ಅದನ್ನು ತಿಳಿಸಿದಾಗ ಅವಳು ನಿರಾಕರಿಸಿ ಅವನ ಜತೆ ಜಗಳಕ್ಕೆ ಇಳಿಯುತ್ತಿದ್ದಳು. ಆಗ ತನ್ನ ಕೌಶಲ್ಯವನ್ನು ಬಳಸಿಕೊಂಡ ಪತಿ ಪತ್ನಿಯ ಅನೈತಿಕ ಸಂಬಂಧ ಬಯಲಿಗೆಳೆದ. ದಂಪತಿಗೆ ಇತ್ತೀಚೆಗೆ ವಿವಾಹ ವಿಚ್ಛೇದನ ನೀಡಲಾಯಿತು.
 
 2015ರ ಫೆಬ್ರವರಿಯಲ್ಲಿ ತನ್ನ ಮನೆಯ ಮೂಲೆಯೊಂದರಲ್ಲಿ ಸಿಗರೇಟ್ ಸೇದಿದ ತುಂಡು ಬಿಸಾಕಿರುವುದನ್ನು ನೋಡಿ ಪತಿಗೆ ಅನುಮಾನ ಬಂದಿತ್ತು. ಆದರೆ ಈ ಪ್ರಸಂಗ ಮತ್ತು ಇನ್ನೂ ಅನೇಕ ಪ್ರಸಂಗಗಳನ್ನು ಪತ್ನಿ ನಿರಾಕರಿಸಿದಾಗ ಅವಳ ಚಟುವಟಿಕೆಯ ಜಾಡು ಹಿಡಿದು ದೃಢ ಸಾಕ್ಷ್ಯಾಧಾರವನ್ನು ಪತಿ ಕಲೆಹಾಕಿದರು. 
 
ತನ್ನ ಮಲಗುವ ಕೋಣೆಯ ಹಿಂದೆ ಕ್ಯಾಮೆರಾವೊಂದನ್ನು ಪತಿ ಇರಿಸಿದರು. ಕೆಲವು ತಿಂಗಳು ಯಾವುದೇ ಅಸಾಮಾನ್ಯ ಘಟನೆ ನಡೆದಿರಲಿಲ್ಲ. ಮಲಗುವ ಕೋಣೆಯ ವಿವಿಧ ಕೋನಗಳಲ್ಲಿ ಇನ್ನೂ ಎರಡು ಕ್ಯಾಮೆರಾಗಳನ್ನು ಪತಿ ಜೋಡಿಸಿದರು.  ತನ್ನ ಪತಿಯ ಫೋನನ್ನು ತನ್ನ ಲ್ಯಾಪ್‌ಟಾಪ್‌ಗೆ ವಿವಿಧ ಅಪ್ಲಿಕೇಶನ್ ಮತ್ತು ರಿಮೋಟ್ ಸರ್ವರ್ ಅಳವಡಿಸುವ ಮೂಲಕ ಸಂಪರ್ಕ ಕಲ್ಪಿಸಿದರು.
 
 ತನ್ನ ಪತಿಯ ಸಂಭಾಷಣೆಗಳನ್ನು ಅವರು ಈ ಪತ್ತೆಹಚ್ಚಿದರು. ಪತ್ನಿ ತನ್ನ ಪ್ರಿಯಕರನಿಗೆ ಕರೆ ಮಾಡಿ ಗರ್ಭನಿರೋಧಕ ಒಯ್ಯುವಂತೆ ತಿಳಿಸಿದ್ದಳು. ಗೋಪ್ಯ ಕ್ಯಾಮರಾಗಳು ಕೂಡ ಅಡುಗೆಮನೆಯಲ್ಲಿ ಮತ್ತು ಮಲಗುವ ಕೋಣೆಯಲ್ಲಿ ಅವರಿಬ್ಬರು ಲೈಂಗಿಕ ಕ್ರಿಯೆ ನಡೆಸಿದ್ದನ್ನು ರುಜುವಾತು ಮಾಡಿದ್ದವು.  ಅವರ ಮೂರು ವರ್ಷದ ಮಗಳು ಮಾತ್ರ ಯಾವುದರ ಅರಿವಿಲ್ಲದೇ ಪಕ್ಕದ ಕೋಣೆಯಲ್ಲಿ ನಿದ್ರೆಗೆ ಜಾರಿದ್ದಳು. 2015ರ ಆಗಸ್ಟ್‌ನಲ್ಲಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ ಮಗುವಿನ ಕಸ್ಟಡಿಯನ್ನು ಪತಿಗೆ ನೀಡಿದ ಪತ್ನಿ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಿದಳು. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇರಾನ್ ಮೇಲೆ ಅಮೆರಿಕೆ ಏರ್‌ಸ್ಟ್ರೈಕ್‌‌: ಡೊನಾಲ್ಡ್ ಟ್ರಂಪ್ ಗಂಡೆದೆಯನ್ನು ಕೊಂಡಾಡಿದ ಇಸ್ರೇಲ್ ಪ್ರಧಾನಿ

ಪಹಲ್ಗಾಮ್‌ ದಾಳಿ: ಪಾಕ್‌ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

ಸ್ಟೇಟ್ ಸ್ಪಾನ್ಸರ್ ಕರಪ್ಷನ್‌ಗೆ ರಾಜ್ಯದ ಕಾಂಗ್ರೆಸ್‌ ಸರ್ಕಾರವೇ ಉತ್ತೇಜನ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆರೋಪ

ಸ್ನೇಹಿತರೊಂದಿಗೆ ತೋಟದ ಮನೆಗೆ ಪಾರ್ಟಿಗೆ ತೆರಳಿದ್ದ ಯುವಕರಿಬ್ಬರು ಕೃಷಿಹೊಂಡದಲ್ಲಿ ಜಲಸಮಾಧಿ

ಏರ್‌ಸ್ಟ್ರೈಕ್‌ಗೆ ಕ್ಯಾರೇ ಎನ್ನದ ಇರಾನ್‌: ಇಸ್ರೇಲ್‌ ಮೇಲೆ ಮಿಸೈಲ್‌ಗಳ ಸುರಿಮಳೆ, ಗಗನಚುಂಬಿ ಕಟ್ಟಡಗಳಿಗೆ ಹಾನಿ

ಮುಂದಿನ ಸುದ್ದಿ