Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಗಳನ್ನು ಬಾವಿಗೆ ತಳ್ಳಿದ ಶಿಕ್ಷಕನಿಗೆ ಜೀವಾವಧಿ

ವಿದ್ಯಾರ್ಥಿಗಳನ್ನು ಬಾವಿಗೆ ತಳ್ಳಿದ ಶಿಕ್ಷಕನಿಗೆ ಜೀವಾವಧಿ
ರಾಯಚೂರು , ಶನಿವಾರ, 24 ಸೆಪ್ಟಂಬರ್ 2016 (09:02 IST)
ಗಲಾಟೆ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳನ್ನು ಬಾವಿಗೆ ತಳ್ಳಿ ಒಬ್ಬ ವಿದ್ಯಾರ್ಥಿಯ ಸಾವಿಗೆ ಕಾರಣನಾಗಿದ್ದ ಶಿಕ್ಷಕನಿಗೆ ರಾಯಚೂರಿನ ಹೆಚ್ಚುವರಿ ವಿಶೇಷ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ನೀಡಿದೆ.

ದುರುಳ ಶಿಕ್ಷಕ ರಾಮಣ್ಣ ಅಪರಾಧ ಸಾಬೀತಾಗಿದ್ದು ಆತನಿಗೆ ಜೀವಾವಧಿ ಶಿಕ್ಷೆ ಜತೆಗೆ 75,000 ದಂಡವನ್ನು ಸಹ ವಿಧಿಸಲಾಗಿದೆ.
 
ನೀರಮಾನ್ವಿ ಗ್ರಾಮದಲ್ಲಿರುವ ಖಾಸಗಿ ಶಾಲೆಯಲ್ಲಿ 2010 ನವೆಂಬರ್ 20 ರಂದು ಈ ಘಟನೆ ನಡೆದಿತ್ತು.
 
ತರಗತಿಯಲ್ಲಿ ಗಲಾಟೆ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ರಾಮಣ್ಣ ಮೂವರು ಮಕ್ಕಳನ್ನು ಶಾಲೆಗೆ ಹತ್ತಿರವಿರುವ ಬಾವಿಗೆ ತಳ್ಳಿದ್ದ. ಅಲ್ಲೇ ಹತ್ತಿರದಲ್ಲಿದ್ದ ಜನರು ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದರು. ಆದರೆ ಗಗನ(5) ಎಂಬ ಬಾಲಕಿ ಮೃತ ಪಟ್ಟಿದ್ದಳು. 
 
ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸರ್ವಾನುಮತ ನಿರ್ಣಯದಿಂದ ಸುಪ್ರೀಂ ಆದೇಶ ಧಿಕ್ಕರಿಸಿದಂತಾಗಲ್ಲ: ಕುಮಾರಸ್ವಾಮಿ