Publish Date: Fri, 01 Dec 2023 (15:05 IST)
Updated Date: Fri, 01 Dec 2023 (15:09 IST)
ಬೈಕ್ ಗೆ ಟ್ಯಾಂಕರ್ ವಾಹನ ಡಿಕ್ಕಿ,ದಂಪತಿ ಸ್ಥಳದಲ್ಲೇ ಸಾವನಾಪ್ಪಿದ್ದು,ನೈಸ್ ರಸ್ತೆಯ ವಜ್ರಮುನೇಶ್ವರ ಅಂಡರ್ ಪಾಸ್ ಬಳಿ ಘಟನೆ ನಡೆದಿದೆ.ನಿರ್ಮಲಾ(45) ಬೈಯಣ್ಣ (55) ಮೃತ ದಂಪತಿಯಾಗಿದ್ದು,ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಅತಿವೇಗವಾಗಿ ವಾಹನ ಚಲಾಯಿಸಿ ಬೈಕ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನಾಪ್ಪಿದ್ದು,ಘಟನೆ ಸಂಬಂಧ ತಲಘಟ್ಟಪುರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತದೇಹ ಕಿಮ್ಸ್ ಆಸ್ಪತ್ರೆಗೆ ರವಾನೆಮಾಡಲಾಗಿದೆ.ಬೆಳಗ್ಗೆ ಹಾರಗದ್ದೆಗೆ ಗೃಹ ಪ್ರವೇಶಕ್ಕೆ ದಂಪತಿ ಹೋಗಿದ್ದರು.ಹನ್ನೊಂದು ಗಂಟೆಯಲ್ಲಿ ಗೃಹ ಪ್ರವೇಶ ಮುಗಿಸಿ ವಾಪಸ್ ಬರುವಾಗ ಅಪಘಾತವಾಗಿದೆ.
ಬೈಕ್ ಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ.ಇಬ್ಬರು ರಸ್ತೆಯಲ್ಲಿ ಹಾರಿ ಬಿದ್ದು, ತಲೆಗೆ ಪೆಟ್ಟಾಗಿತ್ತು.ವಿಜಯನಗರ ಮೂಲದ ದಂಪತಿ ಎಂಬುದು ತಿಳಿದುಬಂದಿದೆ.ಹೊಸಹಳ್ಳಿಯ ದೇವಸ್ಥಾನವೊಂದರ ಬೈಯ್ಯಣ್ಣ ಟ್ರೆಸ್ಟಿಯಾಗಿದ್ದ,ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗಳು ಇದ್ದು,ಇಬ್ಬರು ಕೂಡ ಇಂಜಿನಿಯರಿಂಗ್ ಪದವಿ ಮುಗಿಸಿದ್ದರು.ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ಹಿಂದೆ ಕೂಡ ಎರಡು ಬಾರಿ ಬೈಯ್ಯಣ್ಣ ಅಪಘಾತಕ್ಕೊಳಗಾಗಿದ್ದ .ಎರಡು ಬಾರಿಯೂ ಗಂಭೀರ ಗಾಯವಾಗಿದ್ರು,ಪ್ರಾಣಾಪಾಯದಿಂದ ಪಾರಾಗಿದ್ದರು.ಮೂರನೇ ಬಾರಿ ಇವತ್ತು ಆಕ್ಸಿಡೆಂಟ್ ಆಗಿದೆ, ದಂಪತಿ ಇಬ್ಬರು ಸಾವಾಗಿದೆ ಎಂದು ಮೃತರ ಸಂಬಂಧಿ ಗೋಪಾಲ್ ಹೇಳಿದ್ದಾರೆ.