ಕಾವೇರಿ ಹೋರಾಟ ತೀವ್ರವಾಗಿ ತಾರಕ್ಕೇರುತ್ತಿದ್ದಂತೆ ತಮಿಳು ಬರಹವಿರುವ ಚೀಟಿ ಅಂಟಿಸಿ ಕನ್ನಡಿಗರಿಗೆ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.
ಬೆಂಗಳೂರಿನಲ್ಲಿ ತಮಿಳರಿಗೆ ಧಕ್ಕೆಯಾದಲ್ಲಿ ಚೆನ್ನೈನಲ್ಲಿರುವ ಕನ್ನಡಿಗರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂದು ಕೆಲ ಕಿಡಿಗೇಡಿಗಳು ತಮಿಳು ಭಾಷೆಯ ಬರವಿರುವ ಪೋಸ್ಟರ್ಗಳನ್ನು ಅಂಟಿಸಿದ್ದಾರೆ.
ಕರ್ನಾಟಕದಲ್ಲಿ ತಮಿಳರ ಮೇಲೆ ಏನಾದ್ರೂ ಹಲ್ಲೆ ನಡೆದ್ರೆ ಕನ್ನಡಿಗರ ಮೇಲೆ ಹಲ್ಲೆ ಮಾಡ್ತೀವಿ. ತಮಿಳುನಾಡಿನಲ್ಲಿ ಕನ್ನಡಿಗರು ವಾಸವಾಗಿದ್ದಾರೆ ಅನ್ನೋದನ್ನ ಮರೆಯಬಾರದು. ಕನ್ನಡಿಗರ ಆಸ್ತಿ ಪಾಸ್ತಿಗಳನ್ನು ಧ್ವಂಸಗೊಳಿಸುತ್ತೇವೆ ಎಂದು ಬೆದರಿಕೆಯೊಡ್ಡಲಾಗಿದೆ.
ಕನ್ನಡಿಗರ ಹೋಟೆಲ್ಗಳ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿದ್ದು, ಸುಮಾರು 15 ಕ್ಕೂ ಹೆಚ್ಚು ಪ್ರವಾಸಿ ಬಸ್ಗಳನ್ನು ಕಿಡಿಗೇಡಿಗಳು ಜಖಂಗೊಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ