Daily Horoscope

Select Your Language

Notifications

webdunia
webdunia
webdunia
webdunia

ಪರಿಚಯಸ್ಥ ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಹಲ್ಲೆ

ಪರಿಚಯಸ್ಥ
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಮಾತನಾಡಿದ ಎನ್ನುವ ಕಾರಣಕ್ಕಾಗಿ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳ ತಂಡವೊಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೈದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ವರದಿಯಾಗಿದೆ.
 
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಹಲ್ಲೆಗೊಳ್ಳಗಾದ ವಿದ್ಯಾರ್ಥಿಯನ್ನು ರಾಂಚಿ ಮೂಲದ ರಾಹುಲ್ ಎಂದು ಗುರುತಿಸಲಾಗಿದೆ. ರಾಹುಲ್ ಉಳ್ಳಾಲದಿಂದ ಮಂಗಳೂರು ನಡೆಗೆ ಪ್ರಯಾಣಿಸುತ್ತಿದ್ದ ಎಂದು ಹೇಳಲಾಗುತ್ತಿದೆ. 
 
ಬಸ್ ಅಬ್ಬಕ್ಕ ವೃತ್ತದ ಬಳಿ ನಿಂತ ವೇಳೆ ಪರಿಚಯಸ್ಥ ಯುವತಿಯೊಂದಿಗೆ ರಾಹುಲ್ ಮಾತನಾಡುತ್ತಿದ್ದ. ಇದನ್ನು ನೋಡಿದ ಮೂವರ ತಂಡ ಬಸ್ ಹತ್ತಿ ರಾಹುಲ್‌ನನ್ನು ತರಾಟೆಗೆ ತೆಗೆದುಕೊಂಡು ಆತನ ಮೇಲೆ ಹಲ್ಲೆಗೈದಿದ್ದಾರೆ ಎನ್ನಲಾಗಿದೆ.
 
ಈ ಘಟನೆ ನಡೆಯುತ್ತಿದಂತೆ ಸ್ಥಳೀಯರೊಬ್ಬರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳಾದ ನಿಜಾಮುದ್ದೀನ್, ತೌಸಿಫ್ ಹಾಗೂ ವಾಕರ್ ಎನ್ನುವವರನ್ನು ಬಂಧಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲಾ ಮುಗಿದ ಮೇಲೆ ಐಟಿ ರೈಡ್ ಮಾಡಿದ್ರೆ ಏನು ಪ್ರಯೋಜನ: ಕುಮಾರಸ್ವಾಮಿ