Webdunia - Bharat's app for daily news and videos

Install App

ಸುರ್ಜೇವಾಲನೂ ಬರ್ತಾರೆ, ಮುಂದೆ ರಾಹುಲ್ ಗಾಂಧಿನೂ ಬರಬೇಕಾಗುತ್ತದೆ

Krishnaveni K
ಸೋಮವಾರ, 30 ಜೂನ್ 2025 (17:45 IST)
ಬೆಂಗಳೂರು: ಕಾಂಗ್ರೆಸ್ ಸರಕಾರವು ದಿನದಿಂದ ದಿನಕ್ಕೆ ಹೇಗೆ ಬರ್ಬಾದ್ ಆಗುತ್ತಿದೆ, ಹೇಗೆ ಅಭಿವೃದ್ಧಿ ಶೂನ್ಯವಾಗುತ್ತಿದೆ, ಹೇಗೆ ಕಾಂಗ್ರೆಸ್ ಸರಕಾರದಲ್ಲಿ ಅಸಮಾಧಾನಿತÀ ಶಾಸಕರ ಸಂಖ್ಯೆ ಉಲ್ಬಣವಾಗುತ್ತಿದೆ ಎಂಬುದಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರೇ ಬೆಂಗಳೂರಿಗೆ ಧಾವಿಸಿ ಬಂದುದು ಸಾಕ್ಷೀಕರಿಸುತ್ತದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕರಾದ ಬಿ.ಆರ್.ಪಾಟೀಲ್, ರಾಜು ಕಾಗೆ, ಬೇಳೂರು ಗೋಪಾಲಕೃಷ್ಣ- ಹೀಗೆ ಅನೇಕರನ್ನು ಕರೆದಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಅಭಿವೃದ್ಧಿ ಆಗುತ್ತಿಲ್ಲ; ತಮಗೆ ಅನುದಾನ ಸಿಗುತ್ತಿಲ್ಲ, ನಾವು ಕ್ಷೇತ್ರದಲ್ಲಿ ಮುಖ ಇಟ್ಟುಕೊಂಡು ಓಡಾಡುವುದು ಹೇಗೆ, ಜನರಿಗೆ ಏನು ಉತ್ತರ ಕೊಡಬೇಕು ಎಂದು ಅಸಮಾಧಾನದಿಂದ ಮಾತನಾಡಿರುವುದು, ಎಐಸಿಸಿಗೆ ಪತ್ರ ಬರೆದಿರುವುದು ಕಂಡುಬಂದಿದೆ ಎಂದು ಹೇಳಿದರು.

ಈ ಸಂಖ್ಯೆ ಹೆಚ್ಚಾಗಲಿದೆ ಎಂಬುದಕ್ಕಾಗಿ ಸುರ್ಜೇವಾಲಾ ಅವರು ಧಾವಿಸಿ ಬಂದಿದ್ದಾರೆ ಎಂದು ವಿಶ್ಲೇಷಿಸಿದರು. ನಿಮ್ಮ ಸರಕಾರ ಅಭಿವೃದ್ಧಿಶೂನ್ಯ ಎಂಬುದಕ್ಕೆ ಇನ್ನೇನು ಸಾಕ್ಷಿ ಬೇಕು ಸಿದ್ದರಾಮಯ್ಯನವರೇ ಎಂದು ಕೇಳಿದರು. ತಮ್ಮ ಶಾಸಕರ ಅಹವಾಲು ಶಮನ ಮಾಡಲು ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಎಲ್ಲರೂ ವಿಫಲವಾಗಿದ್ದಾರೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರು. ಅದಕ್ಕಾಗಿ ಸುರ್ಜೇವಾಲಾ ಬಂದಿದ್ದಾರೆ. ನಾಳೆ ರಾಹುಲ್ ಗಾಂಧಿ ಕೂಡ ಬರಬೇಕಾಗಿ ಬರಬಹುದು ಎಂದು ತಿಳಿಸಿದರು.
 
ಹಣ ಬರುವುದಿಲ್ಲ ಎಂಬ ಕಾರಣಕ್ಕೆ ರಾಜ್ಯದ ಗುತ್ತಿಗೆದಾರರು ಟೆಂಡರ್ ಹಾಕುತ್ತಿಲ್ಲ. ರಸ್ತೆ, ಕಟ್ಟಡ ಕಾಮಗಾರಿಗೆ ಟೆಂಡರ್ ಕರೆದರೆ ಅವುಗಳಿಗೆ ಅರ್ಜಿ ಹಾಕುತ್ತಿಲ್ಲ. ಅನುದಾನ ಸಿಗುತ್ತಿಲ್ಲ ಎಂದು ಶಾಸಕರ ದೊಡ್ಡ ಪಟ್ಟಿಯೇ ಕಾಂಗ್ರೆಸ್ಸಿನಲ್ಲಿ ಇದೆಯಂತೆ ಎಂದು ವಿವರಿಸಿದರು. ಸಮಸ್ಯೆ ಬಗೆಹರಿಸಲಾಗದೆ ಸಿದ್ದರಾಮಯ್ಯ ಅವರು ಸುರ್ಜೇವಾಲಾ ಅವರನ್ನು ಕರೆಸಿದ್ದಾರೆ ಎಂದು ಒಪ್ಪಿಕೊಂಡುದು ನಮ್ಮೆಲ್ಲರಿಗೂ ಗೊತ್ತಾಗಿದೆ ಎಂದು ನುಡಿದರು.
 
ರಾಜ್ಯದ ನಾಡಿಗೂ- ಕಾಡಿಗೂ ರಕ್ಷಣೆ ಇಲ್ಲ
ರಾಜ್ಯದಲ್ಲಿ ಮಹಿಳೆಯರು, ಜನರಿಗೆ ರಕ್ಷಣೆ ಇಲ್ಲ. ಎಲ್ಲಿ ಬೇಕಾದರೆ ಅಲ್ಲಿ ಅತ್ಯಾಚಾರ ನಡೆಯುತ್ತಿದೆ. ಬೆಂಗಳೂರಿನಲ್ಲಿ ಮಹಿಳೆ ಹತ್ಯೆ ಮಾಡಿ ಬಿಬಿಎಂಪಿ ಕಸದ ಲಾರಿಗೆ ತುಂಬಿದ್ದಾರೆ. ಕಾನೂನು ಸುವ್ಯವಸ್ಥೆ ಎಕ್ಕುಟ್ಟು ಹೋಗಿದೆ ಎಂಬುದಕ್ಕೆ ಇದೇ ಉದಾಹರಣೆ ಎಂದು ಎನ್.ರವಿಕುಮಾರ್ ಅವರು ಆರೋಪಿಸಿದರು. ನಾಡಿನ ಜನತೆ ಅಸಮಾಧಾನದಿಂದ ಕುದಿಯುತ್ತಿದ್ದಾರೆ ಎಂದರು.
ಆನೆಗಳನ್ನು ಕೊಲ್ಲುತ್ತಿದ್ದಾರೆ. ಜಿಂಕೆ ಹತ್ಯೆ, ವಿಷವಿಟ್ಟು ಹುಲಿಗಳ ಹತ್ಯೆ ನಡೆಯುತ್ತಿದೆ. ಧ್ವನಿ ಇಲ್ಲದ ಪ್ರಾಣಿಗಳನ್ನೂ ಬಿಡುತ್ತಿಲ್ಲ. ರಾಜ್ಯದ ನಾಡಿಗೂ- ಕಾಡಿಗೂ ರಕ್ಷಣೆ ಇಲ್ಲ ಎಂದು ಆಕ್ಷೇಪಿಸಿದರು.
 
ಸಿದ್ದರಾಮಯ್ಯರ ಸರಕಾರ ಕೂಡಲೇ ತೊಲಗುವುದು ಒಳ್ಳೆಯದೆಂದು ಜನರು ಮಾತನಾಡುತ್ತಿದ್ದಾರೆ. ಆರ್‍ಸಿಬಿ, ಕಾನೂನು ಸುವ್ಯವಸ್ಥೆ ವಿಫಲ, ಅಮಾಯಕ ಪೊಲೀಸ್ ಅಧಿಕಾರಿಗಳ ಅಮಾನತು, ವಾಲ್ಮೀಕಿ ನಿಗಮದ ಮತ್ತೊಂದು ಹಗರಣ ಮೊದಲಾದ ಕಾರಣಕ್ಕೆ ಸರಕಾರ ವಿಫಲವಾಗಿದೆ. ವಿಪಕ್ಷವಾದ ಬಿಜೆಪಿ, ಸಿದ್ದರಾಮಯ್ಯರ ಸರಕಾರ ರಾಜೀನಾಮೆ ಕೊಡಬೇಕೆಂದು ಆಗ್ರಹಿಸುತ್ತದೆ ಎಂದು ತಿಳಿಸಿದರು.
 
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುತ್ತೂರು ಬಿಜೆಪಿ ಮುಖಂಡನ ಮಗನಿಂದ ವಂಚನೆಗೊಳಗಾದ ಯುವತಿ ಗಂಡು ಮಗುವಿಗೆ ಜನನ

ಲಿವ್‌ ಇನ್‌ ಸಂಗಾತಿಯನ್ನು ಕೊಂದು ಬಿಬಿಎಂಪಿ ಕಸದ ಲಾರಿಗೆ ಎಸೆದ ಪ್ರಿಯಕರ

94 ವರ್ಷಗಳ ಇತಿಹಾಸದಲ್ಲಿ ಜೂನ್‌ ತಿಂಗಳಲ್ಲೇ ಮೊದಲ ಭಾರೀ ಭರ್ತಿಯಾದ ಕೆಆರ್‌ಎಸ್‌, ಬಾಗಿನ ಅರ್ಪಣೆ

ಹೈಕಮಾಂಡ್ ನೋಡಿಕೊಳ್ಳುತ್ತೆ ಎಂದ ಮಲ್ಲಿಕಾರ್ಜುನ ಖರ್ಗೆ: ಫುಲ್ ಟ್ರೋಲ್

ವಿಜಯೇಂದ್ರಗೆ 10 ನಿಮಿಷ ಅಮಿತ್ ಶಾ ಬೈದಿದ್ದಾರೆ: ಬಸನಗೌಡ ಪಾಟೀಲ್ ಯತ್ನಾಳ್

ಮುಂದಿನ ಸುದ್ದಿ
Show comments