Select Your Language

Notifications

webdunia
webdunia
webdunia
webdunia

ಮಹಿಳೆಯರ ರಕ್ಷಣೆಗೆ ಬಂದಿದೆ `ಸುರಕ್ಷಾ ಆಪ್’: ಬಟನ್ ಒತ್ತಿದರೆ ಕೂಡಲೆ ಸಿಗುತ್ತೆ ಪೊಲೀಸರ ಸಹಾಯ

ಮಹಿಳೆಯರ ರಕ್ಷಣೆಗೆ ಬಂದಿದೆ `ಸುರಕ್ಷಾ ಆಪ್’: ಬಟನ್ ಒತ್ತಿದರೆ ಕೂಡಲೆ ಸಿಗುತ್ತೆ ಪೊಲೀಸರ ಸಹಾಯ
ಬೆಂಗಳೂರು , ಸೋಮವಾರ, 10 ಏಪ್ರಿಲ್ 2017 (11:37 IST)
ಬೆಂಗಳೂರಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪೊಲೀಸ್ ಇಲಾಖೆ ಸುರಕ್ಷಾ ಆಪ್ ಆರಂಭಿಸಿದೆ. ಈ ನೂತನ ಸೇವೆಗೆ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೆಶ್ವರ್ ಚಾಲನೆ ನೀಡಿದರು.

ಈ ಆಪ್ ಡೌನ್ ಲೋಡ್ ಮಾಡಿಕೊಂಡ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದಾಗ ಒಂದು ಬಟನ್ ಒತ್ತಿದರೆ ಸಾಕು 15 ಸೆಕೆಂಡುಗಳಲ್ಲಿ ಪಿಂಕ್ ಹೊಯ್ಸಳದ ಪೊಲೀಸರು ಪ್ರತಿಕ್ರಿಯೆ ನೀಡುತ್ತಾರೆ. ಅಗತ್ಯ ಬಿದ್ದರೆ ಸ್ಥಳಕ್ಕೆ ಅಗಮಿಸಲಿದೆ. ಈ ಸೇವೇಗಾಗಿ ಇವತ್ತಿನಿಂದ 51 ಪಿಂಕ್ ಹೊಯ್ಸಳ ವಾಹನಗಳು ನಗರದಲ್ಲಿ ಕಾರ್ಯಾರಂಭ ಮಾಡುತ್ತಿವೆ.

ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಸರಗಳ್ಳತನ ಇವೇ ಮುಂತಾದ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಈ ಹೊಸ ಸೇವೆ ಆರಂಭಿಸಲಾಗಿದೆ. ಈ 51 ವಾಹನಗಳ ಜೊತೆ 271 ಹೊಯ್ಸಳ ವಾಹನಗಳು ಸಹ ಕಾರ್ಯ ನಿರ್ವಹಿಸಲಿವ

 

Share this Story:

Follow Webdunia kannada

ಮುಂದಿನ ಸುದ್ದಿ

ಇವತ್ತಾದರೂ ಈಡೇರುತ್ತಾ ಅಂಗನವಾಡಿ ಕಾರ್ಯಕರ್ತೆಯರ ವೇತನದ ಬೇಡಿಕೆ