Select Your Language

Notifications

webdunia
webdunia
webdunia
webdunia

ಬೆಂಗಳೂರಿಗೆ ನೂತನ ಪೊಲೀಸ್ ಕಮೀಷನರ್

ಪೊಲೀಸ್ ಕಮೀಷನರ್
ಮಹತ್ವದ ಬೆಳವಣಿಗೆಯೊಂದರಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರನ್ನ ವರ್ಗಾವಣೆ ಮಾಡಲಾಗಿದ್ದು, ನೂತನ ಪೊಲೀಸ್ ಆಯುಕ್ತರಾಗಿ ಟಿ. ಸುನಿಲ್ ಕುಮಾರ್ ಅವರನ್ನ ನೇಮಕ ಮಾಡಲಾಗಿದೆ.

1989ನೇ ಬ್ಯಾಚ್`ನ ಐಪಿಎಸ್ ಅಧಿಕಾರಿಯಾಗಿರುವ ಟಿ. ಸುನಿಲ್ ಕುಮಾರ್ ಅವರು ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದಾರೆ. ಎಂ.ಎನ್. ರೆಡ್ಡಿ ಬಳಿಕವೇ ಸುನೀಲ್ ಅವರ ಹೆಸರು ಕೇಳಿಬಂಧಿತ್ತಾದರೂ ಬಳಿಕ ಮೇಘರಿಕ್ ಅವರನ್ನ ನೇಮಕ ಮಾಡಲಾಗಿತ್ತು.

ಪ್ರವೀಣ್ ಸೂದ್ ಅವರನ್ನ ಕಮ್ಯುನಿಕೇಶನ್, ಎಡಿಜಿಪಿಯಾಗಿ ನೇಮಕ ಮಾಡಲಾಗಿದೆ. ಮೆಟ್ರೋ ರೈಲಿನಲ್ಲಿ ಹಿಮದಿ ಹೇರಿಕೆ ವಿರುದ್ಧ ಹೋರಾಟ ನಡೆಸಿದ್ದ ಕನ್ನಡಪರ ಹೋರಾಟಗಾರರ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ಪ್ರವೀಣ್ ಸೂದ್ ಅವರನ್ನ ವರ್ಗಾವಣೆ ಮಾಡಲಾಗಿದೆ ಎನ್ನಲಾಗುತ್ತಿದ್ದರೂ ಇದರ ಹಿಂದೆ ಭಾರೀ ರಾಜಕೀಯ ಒತ್ತಡ ಇತ್ತೆಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಸ್ವಾತಂತ್ರ್ಯ ದಿನಕ್ಕೆ ಏನು ಭಾಷಣ ಮಾಡಬೇಕು? ನೀವೇ ಐಡಿಯಾ ಕೊಡಿ!