Webdunia - Bharat's app for daily news and videos

Install App

ಅ.2ರಂದು ನಾಡಗೀತೆಯ ರಾಗ, ಅವಧಿ ಕುರಿತು ನಿರ್ಧಾರ ಪ್ರಕಟ: ಸುನೀಲ್ ಕುಮಾರ್

Webdunia
ಬುಧವಾರ, 22 ಸೆಪ್ಟಂಬರ್ 2021 (09:44 IST)
ಬೆಂಗಳೂರು, ಸೆ 22 : "ತಜ್ಞರ ಸಮಿತಿಯ ವರದಿಯ ಆಧಾರದ ಮೇಲೆ ಅಕ್ಟೋಬರ್ 2ರ ಮೊದಲು ಕರ್ನಾಟಕ ನಾಡಗೀತೆಯ (ರಾಜ್ಯ ಗೀತೆ) ರಾಗ ಮತ್ತು ಅವಧಿಯ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಪ್ರಕಟಿಸಲಿದೆ,'' ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.

"ಈ ಹಿಂದೆ ನಾಡಗೀತೆ ವಿಶೇಷವಾಗಿ ಅದರ ರಾಗ ಮತ್ತು ಅದನ್ನು ಪೂರ್ಣಗೊಳಿಸಬೇಕಾದ ಅವಧಿಯ ಬಗ್ಗೆ ಚರ್ಚೆಗಳು ನಡೆದಿವೆ, ಆದರೆ ಸರ್ಕಾರವು ಯಾವುದೇ ಅಂತಿಮ ತೀರ್ಮಾನ ಅಥವಾ ನಿರ್ಧಾರಕ್ಕೆ ಬಂದಿರಲಿಲ್ಲ. ಹಾಗಾಗಿ ಸೆಪ್ಟೆಂಬರ್ 9ರಂದು ನಾವು ಸಾಹಿತ್ಯ ವ್ಯಕ್ತಿಗಳು ಮತ್ತು ಸಂಗೀತ ತಜ್ಞರ ಒಂದು ಸಮಿತಿಯನ್ನು ರಚಿಸಿದ್ದೇವೆ,'' ಎಂದು ವಿಧಾನಸಭೆಯಲ್ಲಿ ತಿಳಿಸಿದರು.
ವಿಧಾನಸಭೆ ಅಧಿವೇಶನದ ಶೂನ್ಯ ವೇಳೆಯಲ್ಲಿ ಮೂಡಿಗೆರೆ ಬಿಜೆಪಿ ಶಾಸಕ ಎಂ. ಪಿ. ಕುಮಾರಸ್ವಾಮಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್, ಮೈಸೂರಿನ ಲೀಲಾವತಿ ಮತ್ತು ಸಾಹಿತಿ ಡಾ. ದೊಡ್ಡರಂಗೇಗೌಡ ಅವರನ್ನೊಳಗೊಂಡ ಸಮಿತಿಗೆ ರಾಗ ಮತ್ತು ಅವಧಿಯ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸಲು ಕೇಳಲಾಗಿದೆ," ಎಂದು ಹೇಳಿದರು.
"ಈ ಸಮಿತಿಯು ತನ್ನ ಮೊದಲ ಸಭೆಯನ್ನು ಸೆಪ್ಟೆಂಬರ್ 16ರಂದು ನಡೆಸಿದ್ದು, ಅವರ ವರದಿಯ ಆಧಾರದ ಮೇಲೆ ಸರ್ಕಾರವು ನಿರ್ಧಾರ ತೆಗೆದುಕೊಳ್ಳುತ್ತದೆ. ಶೀಘ್ರದಲ್ಲೇ ನಾವು ಈ ಕುರಿತು ಘೋಷಣೆ ಮಾಡುತ್ತೇವೆ, ಗಾಂಧಿ ಜಯಂತಿಯ ಮೊದಲು ನಾವು ಘೋಷಣೆ ಮಾಡಲಿದ್ದೇವೆ," ಎಂದು ಸ್ಪಷ್ಟಪಡಿಸಿದರು.
"ನಾಡಗೀತೆಯ ಅವಧಿ ಮತ್ತು ರಾಗದ ಬಗ್ಗೆ ರಾಜ್ಯದಲ್ಲಿ ಪದೇ ಪದೇ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಚೆನ್ನವೀರ ಕಣವಿ ಮತ್ತು ಜಿ.ಎಸ್. ಶಿವರುದ್ರಪ್ಪ ಅವರಂತಹ ಪ್ರಮುಖ ಕವಿಗಳ ಅಡಿಯಲ್ಲಿ ಸಮಿತಿಗಳನ್ನು ರಚಿಸಲಾಗಿತ್ತು. ಆದರೆ ಇನ್ನೂ ಯಾವುದೇ ನಿರ್ಧಾರಕ್ಕೆ ಬರಲಾಗದೆ, ಯಾವಾಗಲೂ ಅಪೂರ್ಣವಾಗಿದ್ದವು ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು. ಇತರ ರಾಜ್ಯಗಳು ನಾಡಗೀತೆಗಳನ್ನು ಹೊಂದಿದೆಯೋ ಇಲ್ಲವೋ, ನಮಗೆ ಖಚಿತವಿಲ್ಲ. ಆದರೆ ನಮ್ಮ ನಾಡಗೀತೆ ನಮ್ಮ ಹೆಮ್ಮೆ ಇದೆ," ಎಂದರು.
ಪ್ರಸ್ತುತ ನಾಡಗೀತೆಯಾದ 'ಜಯ ಭಾರತ ಜನನಿಯ ತನುಜಾತೆ..' ಈ ಹಾಡನ್ನು ಖ್ಯಾತ ಕವಿ ಕುವೆಂಪು ಬರೆದಿದ್ದು, ಇದನ್ನು 2004ರಲ್ಲಿ ಅಧಿಕೃತವಾಗಿ ರಾಜ್ಯ ಗೀತೆಯಾಗಿ ಘೋಷಿಸಲಾಯಿತು. ಇದನ್ನು ಎಲ್ಲಾ ಸರ್ಕಾರಿ ಸಮಾರಂಭಗಳಲ್ಲಿ ಮತ್ತು ಶಾಲೆಗಳಲ್ಲಿ ಪ್ರತಿದಿನ ಹಾಡಲಾಗುತ್ತದೆ.
ಇದೇ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಮಾತನಾಡಿ, "ಹಲವು ವರ್ಷಗಳಿಂದ ರಾಜ್ಯಗೀತೆಗೆ ರಾಗ ಮತ್ತು ಅವಧಿಯನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿರುವುದನ್ನು ಗಮನ ಸೆಳೆದರು. ಇದನ್ನು ತಮ್ಮ ಅಧಿಕಾರಾವಧಿಯಲ್ಲಿ ಸಮಸ್ಯೆಯನ್ನು ಕೊನೆಗೊಳಿಸಲು," ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ರನ್ನು ಕೇಳಿಕೊಂಡರು.
ಪ್ರಸ್ತುತ ನಾಡಗೀತೆಯನ್ನು ವಿವಿಧ ಶೈಲಿಗಳಲ್ಲಿ ಮತ್ತು ರಾಗಗಳಲ್ಲಿ ಹಾಡಲಾಗುತ್ತಿದ್ದು, ಇದು ದೀರ್ಘವಾಗಿದೆ ಎಂದು ಪರಿಗಣಿಸಲಾಗಿದೆ. ಇದರ ಅವಧಿಯನ್ನು ಕಡಿಮೆ ಮಾಡಲು ಮತ್ತು ಹಾಡುವ ಶೈಲಿಯಲ್ಲಿ ಏಕರೂಪತೆಯನ್ನು ತರಲು ನಿರಂತರ ಬೇಡಿಕೆ ಇಡಲಾಗಿತ್ತು.
2019ರಲ್ಲಿ ಕನ್ನಡ ಸಾಹಿತ್ಯ ಪರಿಷತ್ (ಕೆಎಸ್ಪಿ) ಎರಡು ನಿಮಿಷ ಮೂವತ್ತು ಸೆಕೆಂಡುಗಳ ಅವಧಿಯನ್ನು ಮಿತಿಗೊಳಿಸುವ ಪ್ರಸ್ತಾಪವನ್ನು ಮಾಡಿತು. ಅದೇ ರೀತಿ 2014 ರಲ್ಲಿ ಚನ್ನವೀರ ಕಣವಿ ಸಮಿತಿಯಿಂದ ಅವಧಿಯನ್ನು ಒಂದು ನಿಮಿಷ 30 ಸೆಕೆಂಡುಗಳಿಗೆ ಇಳಿಸುವ ಪ್ರಸ್ತಾಪವನ್ನು ಇಟ್ಟಿದ್ದನ್ನು ನೆನಪಿಸಿಕೊಳ್ಳಬಹುದು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments