ಯಾರೇ ಸಿಎಂ ಆಗಿದ್ದರೂ ಅಂಬಿ ಸ್ಮಾರಕ ಮಾಡುತ್ತಿದ್ದರು: ಸುಮಲತಾ ತಿರುಗೇಟು

Webdunia
ಶುಕ್ರವಾರ, 9 ಜುಲೈ 2021 (13:38 IST)
ದಾರಿಯಲ್ಲಿ ಹೋಗೋ ದಾಸಯ್ಯ ಮುಖ್ಯಮಂತ್ರಿ ಆಗಿದ್ದರೂ ಅಂಬರೀಶ್ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುತ್ತಿದ್ದರು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಂಬರೀಶ್ ಅವರ ಹೆಸರಿನಲ್ಲಿ ಸ್ಮಾರಕ ಮಾಡಿದ್ದು ನಾನೇ. ವಿಷ್ಣುವರ್ಧನ್ ಸ್ಮಾರಕ ಇನ್ನೂ ಆಗಿಲ್ಲ ಎಂಬ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಅಂಬರೀಶ್ ಅಂತ್ಯ ಸಂಸ್ಕಾರ ಮಂಡ್ಯದಲ್ಲಿ ನಡೆಸಿದ್ದು ಹೇಗೆ ಎಂಬುದು ನಮಗೆ ಗೊತ್ತಿದೆ. ಸ್ಮಾರಕ ಮಾಡಲು ಮನವಿ ಮಾಡಲು ಹೋದ ರಾಕ್ ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಅವರನ್ನು ಎರಡೂವರೆಗೆ ಗಂಟೆ ಕಾಯಿಸಿದ್ದಾರೆ. ಅಲ್ಲದೇ ಅವನು ಏನ್ ಸಾಧನೆ ಮಾಡಿದ್ದಾನೆ ಅಂತ ಸ್ಮಾರಕ ಮಾಡಬೇಕು? ನಾನ್ಯಾಕೆ ಸ್ಮಾರಕ ಕಟ್ಟಲಿ ಎಂದು ಮನವಿ ಪತ್ರದ ಪೇಪರ್ ಗಳನ್ನು ಹರಿದು ಅವರ ಮುಖದ ಮೇಲೆ ಕುಮಾರಸ್ವಾಮಿ ಎಸೆದಿದ್ದರು. ಆ ವೀಡಿಯೋ ನನ್ನ ಬಳಿ ಈಗಲೂ ಇದೆ ಎಂದು ಸುಮಲತಾ ಗಂಭೀರ ಆರೋಪ ಮಾಡಿದರು.
ಕುಮಾರಸ್ವಾಮಿ ಹೀಗೆ ಮಾತನಾಡುತ್ತಲೇ ಇರಬೇಕು. ಅವರ ವ್ಯಕ್ತಿತ್ವ, ನಿಜ ರೂಪ ಜನಕ್ಕೆ ಗೊತ್ತಾಗಿದೆ. ಒಂದು ಸಲ ಜನರು ಬುದ್ದಿ ಕಲಿಸಿದ್ದಾರೆ. ಇದೇ ರೀತಿ ಬಾಯಿಗೆ ಬಂದಂತೆ ಮಾತನಾಡಿದರೆ ಇನ್ನೊಮ್ಮೆ ಬುದ್ದಿ ಕಲಿಸುತ್ತಾರೆ ಎಂದು ಸುಮಲತಾ ಸವಾಲು ಹಾಕಿದರು.
ಡೀಲ್ ಮಾಡಲು ನನ್ನ ಎಡ-ಬಲ ಯಾರೂ ಇಲ್ಲ, ಏಜೆಂಟರನ್ನು ಇಟ್ಟುಕೊಂಡು ಡೀಲ್ ಮಾಡಿಸುವುದು ನಿಮ್ಮ ಅಭ್ಯಾಸ. ನನ್ನ ವಿರುದ್ಧ ಶ್ರೀಂಠಯ್ಯನನ್ನು ಎತ್ತಿ ಕಟ್ಟಿ ಹೇಳಿಕೆ ಕೊಡಿಸುತ್ತಿದ್ದೀರಿ ಎಂದು ಸುಮಲತಾ ಸ್ಪಷ್ಟಪಡಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುಣೆ ಮಹಾನಗರ ಪಾಲಿಕೆ ಚುನಾವಣೆ: ಭರ್ಜರಿ ಪ್ರಚಾರ ನಡೆಸಿದ ಡಿಸಿಎಂ ಏಕನಾಥ್ ಶಿಂಧೆ

ಶಬರಿಮಲೆ ಚಿನ್ನ ಕಳವು ಪ್ರಕರಣ, ವಿಚಾರಣೆಗೆ ಹಾಜರಾದ ಮಾಜಿ ತಂತ್ರಿ ವಶಕ್ಕೆ

ಕಾಂಗ್ರೆಸ್ ನಾಯಕರಿಂದ ವಿಡಿಯೋ ಬ್ಲ್ಯಾಕ್‍ಮೇಲ್- ಛಲವಾದಿ ನಾರಾಯಣಸ್ವಾಮಿ

ಮಿಲಿಟರಿ ವಾಹನಗಳ ಉತ್ಪಾದನಾ ಘಟಕಕ್ಕೆ ರಾಜನಾಥ್ ಸಿಂಗ್ ಭೇಟಿ

ಡಿಕೆ ಶಿವಕುಮಾರ್ ಗೆ ಮಹತ್ವದ ಜವಾಬ್ಧಾರಿ ಕೊಟ್ಟ ರಾಹುಲ್ ಗಾಂಧಿ

ಮುಂದಿನ ಸುದ್ದಿ
Show comments