ಸುಮಲತಾ ಕನ್ನಡದ ಮಗಳು ಎಂದ ಬಿಜೆಪಿ ಸಂಸದೆ

Webdunia
ಶನಿವಾರ, 9 ಮಾರ್ಚ್ 2019 (17:28 IST)
ಗಂಡ ಸತ್ತ ಹೆಣ್ಮಕ್ಕಳು ಆಚೆ ಬರಬಾರದಾ? ರಾಜಕೀಯಕ್ಕೆ ಬರಬಾರದಾ? ಸಚಿವ ರೇವಣ್ಣನ ಅಸಂಬದ್ಧ ಹೇಳಿಕೆ ಮತ್ತು ಕೀಳು ಮಟ್ಟದ ಮಾತುಗಳಿಗೆ ಅವರು ಕ್ಷಮೆ ಕೇಳಬೇಕೆಂದು ಬಿಜೆಪಿ ಸಂಸದೆ ಆಗ್ರಹ ಮಾಡಿದ್ದಾರೆ.

ಮಂಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದು, ಸುಮಲತಾ ಅವರು ಕನ್ನಡದ ಮಗಳು, ಕನ್ನಡದ ಸೊಸೆಯಾಗಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಇಲ್ಲೇ ನೆಲೆಸಿ ನನ್ನ ರಾಜ್ಯ ಅಂತ ಇಲ್ಲಿದ್ದಾರೆ. ಅಂಬರೀಶ್ ಸತ್ತಾಗ ರೇವಣ್ಣ ನಡೆದುಕೊಂಡ ರೀತಿ ಹಾಗಾದ್ರೆ ಮೊಸಳೆ ಕಣ್ಣೀರಾ? ಎಂದ ಅವರು, ರಾಜಕೀಯವನ್ನ ರಾಜಕೀಯವಾಗಿ ಎದುರಿಸಿ ಈ ರೀತಿ ಬೇಡ ಎಂದು ಸಲಹೆ ನೀಡಿದರು.

ತಕ್ಷಣ ರೇವಣ್ಣ ಕ್ಷಮೆ ಯಾಚಿಸಿ ಮಾತು ವಾಪಾಸ್ ಪಡೆಯಲಿ ಎಂದ ಅವರು, ಸುಮಲತಾಗೆ ಬೆಂಬಲ ನೀಡುವ ಬಗ್ಗೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನನ್ನ ಕ್ಷೇತ್ರ ಗೆಲ್ಲುವ ಕ್ಷೇತ್ರವಾದ ಕಾರಣ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಮಂಡ್ಯ, ಹಾಸನ ಅಂದ್ರೆ ಯಾರೂ ಟಿಕೆಟ್ ಕೇಳಲ್ಲ. ಹೀಗಾಗಿ ಆಸೆ ಪಡೋದು ತಪ್ಪಲ್ಲ, ವರಿಷ್ಠರು ನಿರ್ಧಾರ ಮಾಡ್ತಾರೆ ಎಂದ್ರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೀಪಾವಳಿಗೆ ಕಂಪನಿ ಕಡೆಯಿಂದ ಗಿಫ್ಟ್‌ ಸಿಕ್ಕಿದ್ರೆ ಹೀಗೇ ಸಿಗ್ಬೇಕು, ಎಂ ಕೆ ಭಾಟಿಯಾ ನಡೆಗೆ ಭಾರೀ ಮೆಚ್ಚುಗೆ

ಕಾಂಗ್ರೆಸ್ ಸರ್ಕಾರದ ಆತ್ಮಹತ್ಯಾ ಭಾಗ್ಯಕ್ಕೆ ಇನ್ನೆಷ್ಟು ಬಲಿಯಾಗಬೇಕು: ಆರ್ ಅಶೋಕ್ ಆಕ್ರೋಶ

ಅನುಮತಿ ಇಲ್ಲದೇ ನಡೆಯುವ ನಮಾಜ್ ನಿಷೇಧಿಸಿ: ಸಿಎಂಗೆ ಪತ್ರ ಬರೆದ ಬಸನಗೌಡ ಪಾಟೀಲ್ ಯತ್ನಾಳ್

ಕೊಟ್ಟ ಮಾತು ತಪ್ಪಿ ನಡೆಯಲು ನಾನೇನು ಮೋದಿಯಲ್ಲ: ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments