Select Your Language

Notifications

webdunia
webdunia
webdunia
webdunia

ಮಂಡ್ಯದಲ್ಲಿ ಹಾವಳಿ ಎಬ್ಬಿಸಿದ್ದ ಸಕಲೇಶಪುರದ ಪುಂಡಾನೆ: ರೋಚಕ ಆಪರೇಷನ್ ಮೂಲಕ ಕೊನೆಗೂ ಸೆರೆ

ಕುಶಾಲನಗರದ ದುಬಾರೆ ಕ್ಯಾಂಪ್ನಿಂದ ಕರೆಸಿದ್ದ ಅಭಿಮನ್ಯು, ಭೀಮ, ಗಣೇಶ ಹಾಗೂ ಗೋಪಾಲಸ್ವಾಮಿ ಆನೆಗಳು ಸಹಾಯದೊಂದಿಗೆ ಆಪರೇಷನ್ ಮೌಂಟೇನ್ ಟಸ್ಕರ್ ಸಕ್ಸಸ್ ಆಗಿದೆ.

ಮಂಡ್ಯದಲ್ಲಿ ಹಾವಳಿ ಎಬ್ಬಿಸಿದ್ದ ಸಕಲೇಶಪುರದ ಪುಂಡಾನೆ: ರೋಚಕ ಆಪರೇಷನ್ ಮೂಲಕ ಕೊನೆಗೂ ಸೆರೆ
ಮಂಡ್ಯ , ಬುಧವಾರ, 30 ಜೂನ್ 2021 (07:48 IST)
ಮಂಡ್ಯ: ಬರೋಬ್ಬರಿ 48 ಗಂಟೆಗಳು, ಸುಮಾರು ನಲವತ್ತು ಅಧಿಕಾರಿ ಮತ್ತು ಸಿಬ್ಬಂದಿಯ ಪರಿಶ್ರಮದ ಫಲವಾಗಿ ಮಳವಳ್ಳಿ ಹಾಗೂ ಮದ್ದೂರು ತಾಲೂಕಿನ ಜನರಲ್ಲಿ ಆತಂಕ ಸೃಷ್ಟಿಸಿದ್ದ ಪುಂಡಾನೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.



 ಮದ್ದೂರು ತಾಲ್ಲೂಕಿನ ಗ್ರಾಮಗಳಾದ ಬೆಳ್ಳೂರು, ಬನ್ನಹಳ್ಳಿ ಹಾಗೂ ಕೂಳಗೆರೆ ಗ್ರಾಮಗಳಲ್ಲಿ ಕಾಡನೆಗಳು ರೈತರ ಜಮೀನಿಗೆ ಲಗ್ಗೆ ಇಟ್ಟು ಕಬ್ಬು, ತಂಗು, ರೇಷ್ಮೆ ಬೆಳಗಳನ್ನ ತುಳಿದು ನಾಶ ಮಾಡಿದ್ದವು. ಹೀಗಾಗಿ ರೈತರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು.
 
ಕುಶಾಲನಗರದ ದುಬಾರೆ ಕ್ಯಾಂಪ್ನಿಂದ ಕರೆಸಿದ್ದ ಅಭಿಮನ್ಯು, ಭೀಮ, ಗಣೇಶ ಹಾಗೂ ಗೋಪಾಲಸ್ವಾಮಿ ಆನೆಗಳು ಸಹಾಯದೊಂದಿಗೆ ಆಪರೇಷನ್ ಮೌಂಟೇನ್ ಟಸ್ಕರ್ ಸಕ್ಸಸ್ ಆಗಿದೆ. ಮೌಂಟೇನ್ ಟಸ್ಕರ್-3945 ಹೆಸರಿನ  ಪುಂಡಾನೆಯನ್ನು ದುಬಾರೆ ಕ್ಯಾಂಪ್ಗೆ ರವಾನಿಸಲಾಗಿದೆ. ಚಾಮರಾಜನಗರ ಜಿಲ್ಲೆಯ ಕೌದಳ್ಳಿ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಹಲಗೂರು ಮಾರ್ಗದ ಮೂಲಕ ಶಿಂಷಾ ನದಿಯಲ್ಲಿ ಸಾಗಿ ಬಂದಿರುವ ಈ ಆನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೂಳಗೆರೆ ಗ್ರಾಮದ ಬಳಿ ನಿನ್ನೆ ಕಾಣಿಸಿಕೊಂಡಿತ್ತು.ಇದರಿಂದಾಗಿ ಜನರು ಆತಂಕಕ್ಕೀಡಾಗಿದ್ದರು.

ಕಾಡಾನೆ ಕಾಣಿಸಿಕೊಂಡಿರುವ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳ ತಂಡ ಜನರು ನದಿ ಪಾತ್ರದ ಜಮೀನಿಗೆ ಹೋಗದಂತೆ ಹಾಗೂ ಮನೆಗಳಿಂದ ಹೊರ ಬರದಂತೆ ಧ್ವನಿ ವರ್ಧಕ ಮೂಲಕ ಎಚ್ಚರಿಕೆ ನೀಡಿದ್ದರು. ಇನ್ನು ಈ ಆನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸೆರೆಹಿಡಿದು ಅರಣ್ಯ ವಲಯಕ್ಕೆ ಬಿಡುವ ಸಮಯದಲ್ಲಿ ಕೊರಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿತು. ಇದರಿಂದ ಸಕಲೇಶಪುರ ಆನೆ ಎಂದು ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದರು. ಬಳಿಕ ಆನೆಯನ್ನು ಅರಣ್ಯಾ ಇಲಾಖೆಯ ಅಧಿಕಾರಿಗಳು ಚಾಮರಾಜನಗರ ಜಿಲ್ಲೆಯ ಕೌದಳ್ಳಿ ಅರಣ್ಯಾ ಪ್ರದೇಶಕ್ಕೆ ಬಿಟ್ಟಿದ್ದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಸಚಿವರಿಗೆ ಪರೋಕ್ಷ ಎಚ್ಚರಿಕೆ ಕೊಟ್ಟ ಸಿಎಂ ಯಡಿಯೂರಪ್ಪ