Select Your Language

Notifications

webdunia
webdunia
webdunia
webdunia

10 ವರ್ಷಗಳಿಂದ ಬತ್ತಿದ್ದ ಬಾವಿಯಲ್ಲಿ ಚಿಮ್ಮಿದ ನೀರು

10 ವರ್ಷಗಳಿಂದ ಬತ್ತಿದ್ದ ಬಾವಿಯಲ್ಲಿ ಚಿಮ್ಮಿದ ನೀರು
ರಾಯಚೂರು , ಸೋಮವಾರ, 2 ಮೇ 2016 (09:12 IST)
ಭೀಕರ ಬರಗಾಲದಿಂದ ಎಲ್ಲ ನದಿ ಮೂಲಗಳು ಬತ್ತಿದ್ದರೆ ರಾಯಚೂರಿನ ವೈ.ಮೈಲಾಪುರ ಗ್ರಾಮದಲ್ಲೊಂದು ವಿಸ್ಮಯ ನಡೆದಿದೆ. ಈ ವಿಸ್ಮಯ ಹನಿ ಹನಿ ನೀರಿಗಾಗಿ ತತ್ವಾರ ಪಡುತ್ತಿದ್ದ ಗ್ರಾಮಸ್ಥರಲ್ಲಿ ಸಂತಷ ಮೂಡಿಸಿದೆ. ಅದೇನಂತಹ ಕೌತುಕ ಎನ್ನುತ್ತೀರಾ ? ಮುಂದೆ ಓದಿ. 

ವೈ. ಮೈಲಾಪುರದಲ್ಲಿದ್ದ ಒಂದು ಹಳೆಯ ಬಾವಿ ಕಳೆದ 10 ವರ್ಷಗಳಿಂದ ಬತ್ತಿ ಹೋಗಿತ್ತು. ಆದರೆ ನಿನ್ನೆ ಇದ್ದಕ್ಕಿದ್ದಂತೆ ಬಾವಿಯಲ್ಲಿ ನೀರು ತುಂಬಿ ಬಿಟ್ಟಿದೆ. ಗ್ರಾಮದಲ್ಲಿ ಎಲ್ಲಾ ನೀರಿನ ಮೂಲಗಳು ಬತ್ತಿರುವಾಗ ಹಲ ವರ್ಷಗಳಿಂದ ಒಣಗಿ ಬಿದ್ದಿದ್ದ ಬಾವಿಯಲ್ಲಿ ನಾಲ್ಕು ಅಡಿ ನೀರು ಹೇಗೆ ಬಂತು, ಎಲ್ಲಿಂದ ಬಂತು ಎಂಬ ಕುತೂಹಲ ಸ್ಥಳೀಯರನ್ನು ಕಾಡುತ್ತಿದೆ. ಇದು ಸಿಹಿ ನೀರಾಗಿದ್ದು ಕುಡಿಯಲು ಯೋಗ್ಯವಾಗಿದೆ.
 
ಈ ವಿಸ್ಮಯವನ್ನು ನೋಡು ಸುತ್ತಮುತ್ತಲ ಗ್ರಾಮದ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

Share this Story:

Follow Webdunia kannada

ಮುಂದಿನ ಸುದ್ದಿ

ಜೋಲಿಗೆ ಬಲಿಯಾದ ಬಾಲೆ