ಪಿಎಸ್‌ಐ ರೂಪಾ ತಂಬದ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಜೊತೆ ಸರಕಾರವಿದೆ. ನಿಮಗೆ ಎನಾದರೂ ತೊಂದರೆಗಳಿದ್ದರೆ ನಮ್ಮ ಬಳಿ ಹೇಳಿಕೊಳ್ಳಿ. ಆತ್ಮಹತ್ಯೆಯೇ ಎಲ್ಲಕ್ಕೂ ಪರಿಹಾರವಲ್ಲ ಎಂದು ಗೃಹ ಖಾತೆ ಸಚಿವ ಜೆ.ಪರಮೇಶ್ವರ್ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಖಾತೆ ಸಚಿವ ಜೆ.ಪರಮೇಶ್ವರ್, ಪಿಎಸ್‌ಐ ರೂಪಾ ತಂಬದ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿಯನ್ನು ನೀಡುವಂತೆ ಸೂಚಿಸಿದ್ದೇನೆ. ವಿಜಯನಗರ ಇನ್‌ಸ್ಪೆಕ್ಟರ್ ಹಾಗೂ ರೂಪಾ ಅವರ ಮಧ್ಯ ಸಮಸ್ಯೆ ಇತ್ತು ಎಂದು ತಿಳಿದು ಬಂದಿದೆ. ಸಂಪೂರ್ಣ ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಿರಿಯ ಅಧಿಕಾರಿಗಳು ತಮ್ಮ ಅಧಿಕಾರವನ್ನು ಬಳಕೆ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಕಿರಿಯ ಅಧಿಕಾರಿಗಳಿಗೆ ತಡೆದುಕೊಳ್ಳಲು ಆಗುವುದಿಲ್ಲ. ಮತ್ತು ಎಲ್ಲಾ ಆರೋಪವನ್ನು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಪೊಲೀಸ್ ಪೇದೆಗಳ ನೇಮಕಾತಿ ಪ್ರಾರಂಭವಾಗಿದೆ. ನಿಮ್ಮ ಜೊತೆ ಸರಕಾರವಿದೆ. ನಿಮಗೆ ಎನಾದರೂ ತೊಂದರೆಗಳಿದ್ದರೆ ನಮ್ಮ ಬಳಿ ಹೇಳಿಕೊಳ್ಳಿ ಎಂದು ಗೃಹ ಖಾತೆ ಸಚಿವ ಜೆ.ಪರಮೇಶ್ವರ್ ಪೊಲೀಸ್ ಮನವಿ ಮಾಡಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ