ಬೆಂಗಳೂರು: ತನ್ನ ಮನೆಗೆ ಅತ್ತೆ ಪದೇ ಪದೇ ಬರುವುದನ್ನು ತಡೆಯಲು ಜೇಡರ ಹುಳವನ್ನು ಮನೆಯಲ್ಲಿ ಸಾಕಿಕೊಂಡಿರುವುದಾಗಿ ಅಳಿಯನೊಬ್ಬ ರೆಡ್ಡಿಟ್ ನಲ್ಲಿ ಹೇಳಿಕೊಂಡಿದ್ದಾನೆ.
ತನ್ನ ಹೆಂಡತಿಯ ಜೊತೆ ಮನೆಯೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯ ಮನೆಗೆ ಆತನ ಹೆಂಡತಿಯ ತಂದೆ ತಾಯಿ ಪದೇ ಪದೇ ಬರುತ್ತಿದ್ದರು. ಅದರಲ್ಲೂ ಅತ್ತೆ ಮಾತ್ರ ಹುಚ್ಚಿಯಂತೆ ಆಡುತ್ತಿದ್ದರು. ಇದರಿಂದ ಆತನ ಖಾಸಗಿತನಕ್ಕೆ ಧಕ್ಕೆಯಾಗುತ್ತಿತ್ತು. ಈ ವಿಚಾರವನ್ನು ಆತ ತನ್ನ ಪತಿಗೆ ಹೇಳಿಕೊಂಡಿದ್ದರೂ ಆಕೆ ಅದನ್ನು ಕಡೆಗಣಿಸುತ್ತಿದ್ದರು.
ಇದರಿಂದ ಬೇಸರಗೊಂಡ ಆತ ತನ್ನ ಅತ್ತೆಗೆ ಜೇಡವನ್ನು ಕಂಡರೆ ಸಿಕ್ಕಾಪಟ್ಟೆ ಭಯ ಎಂಬ ವಿಚಾರ ತಿಳಿದು ಅತ್ತೆ ಮನೆಗೆ ಬರುವುದನ್ನು ತಡೆಯಲು ಟರಾಂಟುಲಾ ಎಂಬ ಜೇಡರ ಹುಳುವನ್ನು ತಂದು ಮನೆಯಲ್ಲಿ ಸಾಕಿಕೊಂಡಿದ್ದಾನೆ. ಈ ವಿಷಯ ತಿಳಿದ ಆತನ ಅತ್ತೆ ಇವರ ಮನೆ ಹತ್ತಿರವೂ ಸುಳಿಯಲಿಲ್ಲವಂತೆ. ಈ ವಿಚಾರವನ್ನು ಆತ ರೆಡ್ಡಿಟ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಇದಕ್ಕೆ ಹಲವುನೆಟ್ಟಿಗರು ಕಾಮೆಂಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ