Publish Date: Sun, 30 Jul 2017 (08:47 IST)
Updated Date: Sun, 30 Jul 2017 (08:51 IST)
ಸುಳ್ಯ: ವಿದ್ಯೆ ನೀಡುವ ಗುರುಗಳು ದೇವರಿಗೆ ಸಮಾನ ಅಂತಾರೆ. ಆದರೆ ಇತ್ತೀಚೆಗೆ ಶಿಕ್ಷಕರೇ ಹದ್ದು ಮೀರಿ ವರ್ತಿಸುವ ಘಟನೆಗಳು ಆಗಾಗ ಕೇಳಿಬರುತ್ತಿವೆ. ಅಂತಹದ್ದೇ ಒಂದು ಘಟನೆ ಇಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ವಿದ್ಯಾರ್ಥಿನಿಯೊಬ್ಬಳು, ಫೇಸ್ ಬುಕ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ತನ್ನದೇ ಕಾಲೇಜು ಪ್ರಾಧ್ಯಾಪಕ ಪುಷ್ಪರಾಜ್ ಎಂಬಾತನಿಗೆ ಸರಿಯಾಗಿಯೇ ಮಂಗಳಾರತಿ ಮಾಡಿದ್ದಾಳೆ.
ಪ್ರಾಧ್ಯಾಪಕನ ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದು ಬಹಿರಂಗವಾಗಿ ಪೋಸ್ಟ್ ಮಾಡಿದ ವಿದ್ಯಾರ್ಥಿನಿ, ಪ್ರಾಧ್ಯಾಪಕನ ನಿಜ ರೂಪ ಬಯಲು ಮಾಡಿದ್ದಾಳೆ. ಈ ಮೂಲಕ ಶಿಷ್ಯೆಯನ್ನೇ ಕೆಟ್ಟ ದೃಷ್ಟಿಯಲ್ಲಿ ನೋಡಿ ಗುರುವಿಗೆ ತಕ್ಕ ಪಾಠ ಕಲಿಸಿದ್ದಾಳೆ.