Publish Date: Mon, 27 Feb 2017 (21:04 IST)
Updated Date: Mon, 27 Feb 2017 (21:08 IST)
ವಿದ್ಯಾದೇಗುಲದಲ್ಲಿ ನೆತ್ತರು ಹರಿದಿದೆ. ಸಹಪಾಠಿಗಳೇ ವಿದ್ಯಾರ್ಥಿಯೊಬ್ಬನನ್ನ ಚಾಕುವಿನಿಂದ ಚುಚ್ಚಿ ಕೊಂದಿರುವ ಘಟನೆ ಯಲಹಂಕದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. 16 ವರ್ಷದ ಹರ್ಷಾ ಕೊಲೆಯಾದ ವಿದ್ಯಾರ್ಥಿ.
ಇವತ್ತು ಶಾಲೆಯಲ್ಲಿ ವಾರ್ಷಿಕೋತ್ಸವ ನಡೆಯುತ್ತಿತ್ತು. ಈ ಸಂದರ್ಭ ಜಗಳ ನಡೆದು ಹರ್ಷನಿಗೆ ಚಾಕುವಿನಿಂದ ಚುಚ್ಚಲಾಗಿದೆ. ಬಳಿಕ ಶಿಕ್ಷಕರು ವಿದ್ಯಾರ್ಥಿಯನ್ನ ಆಸ್ಪತ್ರೆಗೆ ದಾಖಲಿಸಸುವ ಪ್ರಯತ್ನ ನಡೆಸಿದರೂ ಮಾರ್ಗ ಮಧ್ಯೆಯೇ ಹರ್ಷನ ಪ್ರಾಣಪಕ್ಷಿ ಹಾರಿಹೋಗಿತ್ತು.
ಪ್ರಕರಣ ಸಂಬಂದ ವರನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.