Webdunia - Bharat's app for daily news and videos

Install App

ಸೈಕಲ್‍ಗಾಗಿ ವಿದ್ಯಾರ್ಥಿ ಕಿಡ್ನಾಪ್! ಮುಂದೇನಾಯ್ತು?

Webdunia
ಭಾನುವಾರ, 13 ಮಾರ್ಚ್ 2022 (14:41 IST)
ಕಲಬುರಗಿ : ಸೈಕಲ್ ವಿಚಾರದಲ್ಲಿ ಗಲಾಟೆ ನಡೆದು ಪಿಯುಸಿ ವಿದ್ಯಾರ್ಥಿಯನ್ನು ಅಪಹರಣ ಮಾಡಿಲಾಗಿದೆ ಎಂಬ ಆರೋಪ ವಿವಿ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ.

ಮೂರು ದಿನಗಳ ಹಿಂದೆ ಟ್ಯೂಷನ್ಗೆ ಹೋಗಿ ಬರುವುದಾಗಿ ಹೇಳಿ ಹೋದವ ಇಲ್ಲಿವರೆಗೆ ಮನೆಗೆ ಬಾರದ ಕಾರಣ ಪೋಷಕರು ಆತಂಕದಲ್ಲಿದ್ದಾರೆ.

ನಗರದ ಪ್ರತಿಷ್ಠಿತ ಕಾಲೇಜೊಂದರಲ್ಲಿ ಪಿಯುಸಿ ಸೈನ್ಸ್ ಓದುತ್ತಿರುವ ಸಂತೋಷ್ ಚೌವ್ಹಾಣ್(17) ಕಿಡ್ನಾಪ್ ಆಗಿರುವ ವಿದ್ಯಾರ್ಥಿ.

ಕಲಬುರಗಿಯ ಶಹಬಾದ ರಸ್ತೆ ಮಾತಾ ಮಾಣಿಕೇಶ್ವರಿ ಕಾಲೋನಿ ನಿವಾಸಿಯಾದ ಸಂತೋಷ್, ಪ್ರತಿನಿತ್ಯ ಕಾಲೇಜು ಹಾಗೂ ಮನೆಗೆ ಓಡಾಡಲು ತನ್ನ ಸ್ನೇಹಿತನ ಬಳಿ ಮೂರು ಸಾವಿರಕ್ಕೆ ಸೈಕಲೊಂದನ್ನು ಖರೀದಿ ಮಾಡಿರುತ್ತಾನೆ.

ನಂತರ ಅದೇ ಸೈಕಲ್ ಕಾಲೇಜಿಗೆ ತೆಗೆದುಕೊಂಡು ಹೋದಾಗ ಅದು ಕಳ್ಳತನ ಮಾಡಿರುವ ಸೈಕಲ್ ಎಂದು ತಿಳಿದುಬಂದಿದೆ. ನಿನ್ನೆ ಸ್ನೇಹಿತ ಸೈಕಲ್ನನ್ನು ಕದ್ದು ಮಾರಾಟ ಮಾಡಿದ್ದಾನೆ ಎಂದು ಸೈಕಲ್ನ ಮೂಲ ವಾರಸುದಾರ ಕಾಲೇಜ್ಗೆ ಬಂದಿದ್ದಾನೆ. ಈ ವೇಳೆ ಸಂತೋಷ್ ಜೊತೆ ಗಲಾಟೆ ಮಾಡಿ ಸೈಕಲ್ ತೆಗೆದುಕೊಂಡು ಹೋಗಿದ್ದಾನೆ. 

ನಂತರ ಅಂದು ಸಂಜೆ ಮನೆಯಿಂದ ರಾಜಾಪುರ ಬಡಾವಣೆಯಲ್ಲಿರುವ ಟ್ಯೂಷನ್ಗೆ ಹೋಗಿ ಬರುವುದಾಗಿ ಮನೆಯಿಂದ ಸಂತೋಷ ಹೋಗಿದ್ದು, ಮೂರು ದಿನವಾದರೂ ಮನೆಗೆ ಮರಳಿಲ್ಲ.
ಮಾರ್ಗ ಮಧ್ಯೆ ದುಷ್ಕರ್ಮಿಗಳು ಸಂತೋಷ್ನನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಈ ಘಟನೆ ಮಾರ್ಚ್ 11 ರಂದು ನಡೆದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂಗಳಿಗೆ ಯಾತಕ್ಕೋಸ್ಕರ ಅಪಮಾನ ಮಾಡುತ್ತಿದ್ದೀರಿ ಸಿದ್ದರಾಮಯ್ಯನೋರೇ: ವಿಜಯೇಂದ್ರ

DK Shivakumar: ಕೇಂದ್ರ ಚಿನ್ನದ ಬೆಲೆ ಏರಿಕೆ ಮಾಡಿ ಮಹಿಳೆಯರು ಮಾಂಗಲ್ಯ ಕಟ್ಟಿಕೊಳ್ಳಲಾಗದ ಪರಿಸ್ಥಿತಿಯಾಗಿದೆ: ಡಿಕೆ ಶಿವಕುಮಾರ್

ಸಿಎಂ ಕುರ್ಚಿ ಗುದ್ದಾಟದ ನಡುವೆಯೂ ಗುಟ್ಟಾಗಿ ಮಾತುಕತೆ ನಡೆಸಿದ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌

ಸಿಂಹದ ಹಾಗೇ ನಾಯಿಗಳನ್ನು ಸಾಕಿಕೊಂಡಿರುವ ಶ್ವಾನಪ್ರೇಮಿ ಸತೀಶ್‌ಗೆ ಇಡಿ ಶಾಕ್‌, ತನಿಖೆಯಲ್ಲಿ ಗೊತ್ತಾಯ್ತು ಅಸಲಿಯತ್ತು

Karnataka: ಪೋಷಕರ ಸಂದರ್ಶನ ಮಾಡುವಂತಿಲ್ಲ, ಹೆಚ್ಚು ಫೀಸ್ ಕೇಳೋ ಹಾಗಿಲ್ಲ: ಖಾಸಗಿ ಶಾಲೆಗಳಿಗೆ ಹೊಸ ರೂಲ್ಸ್ ಇಲ್ಲಿದೆ

ಮುಂದಿನ ಸುದ್ದಿ
Show comments