Publish Date: Tue, 04 Sep 2018 (11:02 IST)
Updated Date: Tue, 04 Sep 2018 (11:04 IST)
ಬೆಂಗಳೂರು: ತನ್ನದೇ ಕಾಲೇಜು ಹಾಸ್ಟೆಲ್ ನ ಹುಡುಗಿಯರು ಬಾತ್ ರೂಂನಲ್ಲಿ ಸ್ನಾನ ಮಾಡುವಾಗ ರಹಸ್ಯ ಕ್ಯಾಮರಾ ಇಟ್ಟು ಅವರ ನಗ್ನ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದ ಯುವಕನನ್ನು ಬಂಧಿಸಲಾಗಿದೆ.
ಬೆಂಗಳೂರಿನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ 21 ವರ್ಷದ ಸಿದ್ಧಾರ್ಥ್ ಎಂಬಾತ ತನ್ನ ಗರ್ಲ್ ಫ್ರೆಂಡ್ ಸಹಾಯದಿಂದ ಇಂತಹ ಕೆಲಸ ಮಾಡುತ್ತಿದ್ದ. ಈತನನ್ನು ಇದೀಗ ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಈತನ ಗೆಳತಿಯನ್ನೂ ವಶಕ್ಕೆ ಪಡೆದು ಪೊಲೀಸರು ಇದೀಗ ವಿಚಾರಣೆ ನಡೆಸುತ್ತಿದ್ದಾರೆ. ಆಕೆಯ ಹೇಳಿಕೆ ಪ್ರಕಾರ ಆರೋಪಿ ವಿದ್ಯಾರ್ಥಿ ಬೆದರಿಸಿ ವಿಡಿಯೋ ಚಿತ್ರೀಕರಿಸಿ ಕಳುಹಿಸಲು ಹೇಳುತ್ತಿದ್ದ. ಈ ವಿಡಿಯೋಗಳನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದ. ಇದೀಗ ಆಕೆಯ ಹೇಳಿಕೆಗಳ ಸತ್ಯಾಸತ್ಯತೆ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.