Select Your Language

Notifications

webdunia
webdunia
webdunia
webdunia

ಟೈಪ್-2 ಡಯಾಬಿಟೀಸ್ ರೋಗಿಗಳಲ್ಲಿ ರೋಗಿಗಳಲ್ಲಿ ಅತಿಯಾದ ಆಯಾಸ-ಅಧ್ಯಯನದಲ್ಲಿ ದೃಢ

ಟೈಪ್-2 ಡಯಾಬಿಟೀಸ್ ರೋಗಿಗಳಲ್ಲಿ ರೋಗಿಗಳಲ್ಲಿ ಅತಿಯಾದ ಆಯಾಸ-ಅಧ್ಯಯನದಲ್ಲಿ ದೃಢ
bangalore , ಶುಕ್ರವಾರ, 12 ನವೆಂಬರ್ 2021 (20:35 IST)
ಬೆಂಗಳೂರು: ಕೋವಿಡ್ ಬಳಿಕ ಟೈಪ್-2 ಡಯಾಬಿಟೀಸ್ ರೋಗಿಗಳಲ್ಲಿ ಅತಿ ಹೆಚ್ಚು ಆಯಸ್ಸು ಬರುತ್ತಿರುವುದು ಅಧ್ಯಯನದಿಂದ ದೃಢಪಟ್ಟಿದೆ.. 
ಫೋರ್ಟಿಸ್, ಸಿ-ಡಾಕ್, ಏಮ್ಸ್,ಸಿನೆಟ್, ಎನ್-ಡಾಕ್ ಮತ್ತು ಡಯಾಬಿಟಿಸ್ ಫೌಂಡೇಶನ್ ಸಂಸ್ಥೆಗಳು ನಡೆಸಿದ ಅಧ್ಯಯನದಲ್ಲಿ ಟೈಪ್-2 ಡಯಾಬಿಟೀಸ್ ಇರುವವರು ಕೋವಿಡ್ ಸೋಂಕಿಗೆ ಒಳಗಾದ ನಂತರ ಸಾಮಾನ್ಯರಿಗಿಂತ ಹೆಚ್ಚು ಆಯಾಸ ಮತ್ತು ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ ಎಂಬುದು ಸ್ಪಷ್ಟವಾಗಿದೆ. 
 
ಈ ಬಗ್ಗೆ ವರದಿ ಬಿಡುಗಡೆ ಮಾಡಿ ಮಾತನಾಡಿದ ಫೋರ್ಟಿಸ್ ಸಿ-ಡಾಕ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಅನೂಪ್ ಮಿಶ್ರ, ನಾವು ನಡೆಸಿದ ಅಧ್ಯಯನದಲ್ಲಿ ಟೈಪ್-2 ಡಯಾಬಿಟೀಸ್ ಹೊಂದಿರುವ ಹಾಗೂ ಕೋವಿಡ್ ಸೋಂಕಿಗೆ ತುತ್ತಾದ 56 ಜನರ ಆರೋಗ್ಯವನ್ನು ಪರಿಶೀಲಿಸಲಾಯಿತು. ಜೊತೆಗೆ 56 ಮಂದಿ ಕೋವಿಡ್‌ನಿಂದ ಬಳಲದೇ ಇರುವ ಟೈಪ್-2 ಡಯಾಬಿಟೀಸ್ ರೋಗಿಗಳನ್ನು 92 ದಿನಗಳ ಕಾಲ ಪರೀಕ್ಷೆಗೆ ಒಳಪಡಿಸಲಾಯಿತು. ಡಯಾಬಿಟೀಸ್ ಇದ್ದು ಕೋವಿಡ್‌ಗೆ ತುತ್ತಾಗಿ ನಂತರ ಗುಣವಾದವರ ಆರೋಗ್ಯ ಸಂಪೂರ್ಣ ಹದಗೆಡುತ್ತಾ ಇತ್ತು, ಜೊತೆಗೆ ಹೆಚ್ಚಿನ ಆಯಾಸ ಇವರಿಗೆ ಕಾಡುತ್ತಿತ್ತು. ರಕ್ತದಲ್ಲಿ ಗ್ಲೂಕೋಸ್ ಮಟ್ಟ ಏರಿಕೆ, ಬಿಪಿಯಲ್ಲಿ ಏರಿಳಿತ, ದೈಹಿಕ ಸಾಮರ್ಥ್ಯ ಕುಸಿತ, ತೂಕದಲ್ಲಿ ಅತಿಯಾದ ಇಳಿಕೆ ಸೇರಿದಂತೆ ಇತರೆ ಅಸಾಧಾರಣ ವ್ಯತ್ಯಾಸಗಳು ಕಂಡು ಬಂದಿದೆ ಎಂದು ವಿವರಿಸಿದ್ದಾರೆ.
 
ಮಧುಮೇಹಿಗಳಿಗೆ ಕೋವಿಡ್ ಸೋಂಕು ಅತ್ಯಂತ ಅಪಾಯಕಾರಿ, ಡಯಾಬಿಟೀಸ್ ಇರುವವರು ಸಾಧ್ಯವಾದಷ್ಟು ಬೇಗ ಈ ಸೋಂಕಿಗೆ ಎಚ್ಚರಿಕೆ ವಹಿಸಬೇಕು, ಒಂದು ವೇಳೆ ಸೋಂಕಿಗೆ ತುತ್ತಾಗಿದ್ದರೂ ಗುಣಮುಖರಾದ ಬಳಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಲಾಗುತ್ತದೆ. ರಕ್ತದಲ್ಲಿ ಗ್ಲೂಕೋಸ್ ಪ್ರಮಾಣ ಇಷ್ಟವಾಗುವಂತೆ ನೋಡಿಕೊಳ್ಳಬೇಕು. ಈ ಎಲ್ಲ ಅಂಶಗಳ ಅಧ್ಯಯನದಲಿಯೇ ಸಾಭೀತಾಗಿರುವುದರಿಂದ ಮಧುಮೇಹಿಗಳು ಚೆನ್ನಾಗಿ ಇದ್ದರೆ ಒಳ್ಳೆಯದು,

Share this Story:

Follow Webdunia kannada

ಮುಂದಿನ ಸುದ್ದಿ

ಆನ್ಲೈನ್ ಶಾಪಿಂಗ್ ಮುನ್ನ ಹುಷಾರ್!