Webdunia - Bharat's app for daily news and videos

Install App

ದಾರಿ ತಪ್ಪಿದ ಮಗ: ಕೊಲ್ಲಲು ಅನುಮತಿ ಕೊಡಿ ಇಲ್ಲವೇ ಜೈಲಿಗೆ ಹಾಕಿ ಎಂದ ತಾಯಿ

Sampriya
ಮಂಗಳವಾರ, 12 ನವೆಂಬರ್ 2024 (14:22 IST)
Photo Courtesy X
ತುರುವೇಕೆರೆ: ಮಾದಕ ವ್ಯಸನ ಸೇರಿದಂತೆ ಹಲವಾರು ದುಶ್ಚಟಗಳ ದಾಸನಾಗಿದ್ದ ಮಗನನ್ನು ಸಾಯಿಸಲು ಅನುಮತಿ ಕೋರಿ ತಾಯಿಯೊಬ್ಬಳು ಠಾಣೆ ಮೆಟ್ಟಿಲೇರಿರುವ ಘಟನೆ  ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾದಕ ವ್ಯಸನಿಯಾಗಿರುವ 20 ವರ್ಷದ ಮಗನನ್ನು ಸರಿ ದಾರಿಗೆ ತರಲು ಸಾಧ್ಯವಾಗದೆ ಬೇಸತ್ತ ತಾಯಿಯೊಬ್ಬಳು ಮಗನನ್ನು ಸಾಯಿಸಲು ಅನುಮತಿ ಕೋರಿದ್ದಾಳೆ. ಮಗ ಅಭಿ ನನ್ನ ಗೌರವ ಹಾಳು ಮಾಡುತ್ತಿದ್ದಾನೆ. ಮನೆಯಲ್ಲಿ ಕಿರುಕುಳ ಕೊಡುತ್ತಿದ್ದಾನೆ. ದಯಮಾಡಿ ಆತನನ್ನು ಜೈಲಿಗೆ ಹಾಕಿ ಸರಿ ದಾರಿಗೆ ತನ್ನಿ. ಇಲ್ಲವೇ ಆತನನ್ನು ಸಾಯಿಸಲು ಅನುಮತಿ ಕೊಡಿ. ಅವನನ್ನು ಕೊಂದು, ನಾನೂ ಸಾಯುತ್ತೇನೆ ಎಂದು ಪಟ್ಟಣದ ನಿವಾಸಿ ರೇಣುಕಮ್ಮ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಸಣ್ಣದೊಂದು ಹೊಟೇಲ್ ನಡೆಸುತ್ತಿರುವ ರೇಣುಕಮ್ಮ ಮಗನನ್ನು ಪೊಲೀಸ್‌ ಠಾಣೆಗೆ ಕರೆ ತಂದಿದ್ದರು. ಕೆಟ್ಟ ಸ್ನೇಹಿತರ ಸಹವಾಸಕ್ಕೆ ಬಿದ್ದ ಮಗ ದುಶ್ಚಟಗಳ ದಾಸನಾಗಿದ್ದಾನೆ. ಆತನನ್ನು ಸರಿ ಮಾಡಲು ಹಲವು ಬಾರಿ ಪ್ರಯತ್ನಿಸಿದ್ದೇನೆ. ಆದರೆ ನಾನು ಸೋತು ಹೋಗಿದ್ದೇನೆ ಎಂದು ಅವರು ಪೊಲೀಸರ ಮುಂದೆ ಕಣ್ಣೀರಿಟ್ಟಿರು.

ಅದಲ್ಲದೆ ದೂರಿನಲ್ಲಿ ತುರುವೇಕೆರೆಯಲ್ಲಿ ಗಾಂಜಾ ಸೇರಿದಂತೆ ಹಲವಾರು ಮಾದಕ ವಸ್ತುಗಳು ರಾಜಾರೋಷವಾಗಿ ಮಾರಾಟವಾಗುತ್ತಿವೆ. ಇದರಿಂದ ಅನೇಕ ಯುವಕರು ದಾರಿ ತಪ್ಪಿದ್ದಾರೆ ಎಂದರು.

ಪೊಲೀಸರು ರೇಣುಕಮ್ಮಗೆ ಸಹವಾಸ ದೋಷದಿಂದ ಹಾಳಗಿರುವ ನಿಮ್ಮ ಮಗನನ್ನು ಸರಿ ದಾರಿಗೆ ನಾವು ತರುತ್ತೇವೆ ಎಂದು ಧೈರ್ಯ ತುಂಬಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ