ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಹಾಡುಹಗಲೇ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ..ನವೀನ್ ಕುಮಾರ್ ಎಂಬುವವರ ಚಿನ್ನಾಭರಣ ಕದ್ದು ಮೂವರು ಐನಾತಿ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಹೆಂಡತಿಯ ಸೀಮಂತ್ ಕಾರ್ಯಕ್ರಮಕ್ಕಾಗಿ ಖಾಸಗಿ ಬ್ಯಾಂಕ್ ನಿಂದ ಚಿನ್ನಾಭರಣ ಡ್ರಾ ಮಾಡಿಕೊಂಡು ಬರುತ್ತಿದ್ದ ನವೀನ್ರನ್ನ ಗಮನಿಸಿದ ಕಳ್ಳರು. ಕಾರಿನ ಬಾನೆಟ್ ಮೇಲೆ ಆಯಿಲ್ ಹಾಕಿ ನವೀನ್ ಗಮನವನ್ನ ಬೇರೆಡೆ ಸೆಳೆದು 20 ತೊಲೆಯ ಚಿನ್ನಾಭರಣ ಕದ್ದು ಆರೋಪಿಗಳು ಪರಾರಿಯಾಗಿದ್ದಾರೆ.. ಕಳ್ಳರ ಈ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.