Publish Date: Fri, 22 Jul 2016 (11:07 IST)
Updated Date: Fri, 22 Jul 2016 (11:31 IST)
ನಗರದಲ್ಲಿರುವ ತಮಿಳು ಮತದಾರರನ್ನು ಸೆಳೆಯಲು ಕೆಲ ಶಾಸಕರು 'ಕಬಾಲಿ' ಸಿನಿಮಾದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ನಗರದಲ್ಲಿರುವ ತಮಿಳು ಮತದಾರರನ್ನು ಸೆಳೆದು ತಮ್ಮ ವೋಟ್ ಬ್ಯಾಂಕ್ ಬಲ ಪಡಿಸಿಕೊಳ್ಳುವ ಉದ್ದೇಶ ಹೊಂದಿರುವ ಎನ್.ಎ.ಹ್ಯಾರಿಸ್, ಆರ್.ವಿ.ದೇಶಪಾಂಡೆ ಹಾಗೂ ಮುನ್ನಿರತ್ನಂ ಸೇರಿದಂತೆ ಆರು ಜನ ಶಾಸಕರು ಕಬಾಲಿ ಸಿನಿಮಾದ ಟಿಕೆಟ್‌ಗಳನ್ನು ಖರೀದಿಸಿ ತಮ್ಮ ಕ್ಷೇತ್ರದ ಮತದಾರರಿಗೆ ಹಂಚಿಕೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ನಗರದಲ್ಲಿ ಕಬಾಲಿ ಸಿನಿಮಾ ಬಾರಿ ಸದ್ದು ಮಾಡುತ್ತಿದ್ದು, ಎಲ್ಲ ಚಿತ್ರಮಂದಿರಗಳು ಹೌಸ್‌ಫುಲ್ ಆಗಿರುವ ಹಿನ್ನೆಲೆಯಲ್ಲಿ ಶಾಸಕರು ತಮ್ಮ ಪ್ರಭಾವ ಬಳಸಿಕೊಂಡು ಮುಂಗಡವಾಗಿ ಟಿಕೆಟ್‌ಗಳನ್ನು ಖರೀದಿಸಿ ತಮ್ಮ ತಮ್ಮ ಕ್ಷೇತ್ರದ ಮತದಾರರಿಗೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ