Webdunia - Bharat's app for daily news and videos

Install App

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ರಾಜ್ಯಮಟ್ಟದ ಚಿತ್ರ, ಶಿಲ್ಪ ಹಾಗೂ ಛಾಯಾಚಿತ್ರ ಕಲೆ ಸ್ಪರ್ಧೆ

Webdunia
ಸೋಮವಾರ, 13 ಜನವರಿ 2020 (18:59 IST)
ಕಲಬುರಗಿಯಲ್ಲಿ  ಫೆಬ್ರುವರಿ 5, 6 ಹಾಗೂ 7ರಂದು ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ ದೃಶ್ಯಕಲಾವಿದರಿಗಾಗಿ ಕಲಾ ಸ್ಪರ್ಧೆ ಆಯೋಜಿಸಲಾಗಿದೆ.

ರಾಜ್ಯಮಟ್ಟದ ಚಿತ್ರ, ಶಿಲ್ಪ ಹಾಗೂ ಛಾಯಾಚಿತ್ರ ಕಲೆ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಅರ್ಹ ಕಲಾವಿದರಿಂದ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ.

ಕಲಾಕೃತಿಗಳು ಡ್ರಾಯಿಂಗ, ಪೇಂಟಿಂಗ ಹಾಗೂ ಗ್ರಾಫಿಕ್ ಪ್ರಕಾರಗಳಲ್ಲಿ ರಚನೆಯಾಗಿರಬೇಕು. ಕಲಾಕೃತಿಗಳು ಜಲವರ್ಣ, ತೈಲವರ್ಣ, ಡ್ರಾಯಿಂಗ ಅಥವಾ ಮಿಶ್ರಮಾಧ್ಯಮಗಳಲ್ಲಿ ಒಂದಾಗಿರಬೇಕು. ಕಲಾಕೃತಿ ಅಳತೆಯು  3*3 ಅಡಿ ಮೀರಿರಬಾರದು. 1*1 ಅಡಿಗಿಂತ ಕಡಿಮೆ ಇರಬಾರದು. ಕಲಾಕೃತಿಗಳನ್ನು ಸ್ಪರ್ಧೆಗೆ ತಲುಪಿಸುವ ಜವಾಬ್ದಾರಿ ಕಲಾವಿದರದಾಗಿದೆ. ಕಲಾಕೃತಿಯು ಸುಂದರ ಫ್ರೇಮ್‍ನೊಂದಿಗೆ ಸಲ್ಲಿಸಬೇಕು. ಕಲಾಕೃತಿಯ ಜೊತೆಗೆ ಕಲಾವಿದರ ಸ್ವವಿವರವುಳ್ಳ ಪರಿಚಯ ಪತ್ರ ಹಾಗೂ ಎರಡು ಭಾವಚಿತ್ರಗಳನ್ನು ಸಹ ನೀಡಬೇಕು.

ಈ ಕಲಾಕೃತಿಗಳನ್ನು ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುತ್ತದೆ. ಒಟ್ಟು 10 ನಗದು ಪ್ರಶಸ್ತಿಗಳಿದ್ದು, ನೆನಪಿನ ಕಾಣಿಕೆ ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ. ಪ್ರದರ್ಶನದಲ್ಲಿ ಆಯ್ಕೆಯಾದ ಎಲ್ಲಾ ಕಲಾವಿದರಿಗೆ ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಲಾಗುತ್ತದೆ.  


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments