Select Your Language

Notifications

webdunia
webdunia
webdunia
webdunia

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ದಿನದ ಮಟ್ಟಿಗೆ ಉತ್ತರಪ್ರದೇಶ ಪ್ರವಾಸ

State Chief Minister Basavaraja Bommai
bangalore , ಶನಿವಾರ, 11 ಡಿಸೆಂಬರ್ 2021 (20:32 IST)
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ದಿನದ ಮಟ್ಟಿಗೆ ಉತ್ತರಪ್ರದೇಶ ಪ್ರವಾಸ ಕೈಗೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಸಿಎಂ ಬೊಮ್ಮಾಯಿ ಕುಟುಂಬ ಸಮೇತವಾಗಿ ಮೂರು ದಿನಗಳ ಕಾಲ ಉತ್ತರಪ್ರದೇಶ ಪ್ರವಾಸ ಕೈಗೊಂಡು, ಕಾಶಿ, ಆಯೋಧ್ಯೆ, ವಾರಣಾಸಿಗೆ ಭೇಟಿ ಕೊಡುವ ಪ್ಲ್ಯಾನ್ ನಲ್ಲಿ ಇದ್ದರು. ಬೆಳಗಾವಿಯಲ್ಲಿ ಅಧಿವೇಶ ನಡೆಯುವಾಗ ಉತ್ತರ ಕರ್ನಾಟಕದವರೇ ಆಗಿರುವ ಬೊಮ್ಮಾಯಿ ಮೂರು ದಿನಗಳ ಕಾಲ ಗೈರಾದ್ರೆ ಗೊಂದಲ ಸೃಷ್ಠಿಯಾಗುತ್ತದೆ. ಜೊತಗೆ ವಿಪಕ್ಷಗಳ ಟೀಕೆಗೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಸಿಎಂ ಬೊಮ್ಮಾಯಿ ತಮ್ಮ ಪ್ಲ್ಯಾನ್ ಬದಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ಲ್ಯಾನ್ ಬದಲಿಸಿರುವ ಸಿಎಂ ಒಂದು ದಿನ ಮಾತ್ರ ಉತ್ತರಪ್ರದೇಶ ಪ್ರವಾಸಕ್ಕೆ ತೆರಳಲು ಮುಂದಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಯುಪಿಯಲ್ಲಿ  ಬಿಜೆಪಿ ಮುಖ್ಯಮಂತ್ರಿಗಳ ಸಮ್ಮೇಳನವಿದೆ. ಆದ್ದರಿಂದ ಒಂದು ದಿನದ ಮಟ್ಟಿಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮತಾಂತರ ಕಾಯ್ದೆ ಜಾರಿ ಮಾಡಲು ಮುಂದಾಗುತ್ತದೆ -ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್