Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಶುರುವಾಯ್ತು ಕೇರಳಾತಂಕ

Started in the state of Kerala
ಕರೊನಾ ಆಯ್ತು,, ಈಗ ಕೇರಳದ ನಿಫಾ ವೈರಸ್ ಕಾಟ ಶುರುವಾಗಿದೆ. ಈಗಾಗಲೇ ರಾಜ್ಯದ ಎಲ್ಲ ಕಡೆ ಹೈ ಅಲರ್ಟ್ ಘೋಷಣೆ ಸರ್ಕಾರ ಮಾಡಿದೆ.ನಿಫಾ ಬಗ್ಗೆ ಸರ್ಕಾರಕ್ಕೆ ತಜ್ಞರು ಕೊಟ್ಟಿರೋ ಸಲಹೆಗಳೇನು...?
 
 *ಪ್ರಾಣಿಗಳಿಗೆ ಮೇ ಯಿಂದ ಸೆಪ್ಟೆಂಬರ್ ವರೆಗೆ ಸಂತಾನೋತ್ಪತ್ತಿ ಕಾಲ
 
ಆಗ ಪ್ರಾಣಿಗಳಿಂದ ಮನುಷ್ಯನಿಗೆ ತಗಲುವ ಸಾಧ್ಯತೆ ಹೆಚ್ಚು
 
ನಿಫಾ ವೈರಸ್ ಪತ್ತೆಯಾದ ಜಾಗಗಳಿಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು
 
ಪ್ರಾಣಿಗಳಿಗೆ ಹುಶಾರಿಲ್ಲದಿದ್ದಾಗ ಆದಷ್ಟು ದೂರವಿರಬೇಕು
 
 ಈ ವೈರಸ್ ಗೂ ನಿಖರವಾದ ಲಸಿಕೆ, ಟ್ರಿಟ್ಮೆಂಟ್ ಇಲ್ಲ... 
 
ವೈರಸ್ ಅಂಟಲು 4-14 ದಿನ ಸಮಯ ತೆಗೆದುಕೊಳ್ಳುತ್ತೆ.ಕರೊನಾ, ಹೆಚ್ 1, ಎನ್ 1 ರೀತಿಯ ಲಕ್ಷಣಗಳೇ ಇರತ್ತೆ.ವೈರಲ್ ಫೀವರ್ ತರ ಕಾಣಿಸಿಕೊಳ್ಳುತ್ತೆ ನಿಫಾ ವೈರಸ್ .ನಿಫಾ ವೈರಸ್ ಬಗ್ಗೆ ಆತಂಕಕಾರಿ ವಿಚಾರ ತಜ್ಞ ವೈದ್ಯ ಡಾ.  ಮನೋಹರ್ ಕೆ.ಹೊರಹಾಕಿದಾರೆ. ಡಾ. ಮನೋಹರ್ ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರಾಗಿದ್ದು,ಕರೊನಾಗಿಂತ ಡೇಂಜರ್ ಈ ಡೆಡ್ಲಿ ನಿಫಾ. ಈ ನಿಫಾ ಡೈರೆಕ್ಟ್ ಅಟ್ಯಾಕ್ ಮಾಡೋದು ಮೆದುಳಿಗೆ,ಕೋಮಾಗೆ ಹೋಗೋದು, ಫಿಡ್ಸ್ ಬರೋ ಸಾಧ್ಯತೆ ಹೆಚ್ಚು.ಕರೊನಾಗಿಂತ ಸಾವಿನ ಸಂಖ್ಯೆ   ಈ ನಿಫಾ ವೈರಸ್ ಹೆಚ್ಚು ಮಾಡುತ್ತೆ .ನಿಫಾ ವೈರಸ್ ಬಗ್ಗೆ ಎಚ್ಚರವಹಿಸಬೇಕೆಂದು ತಜ್ಞರು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರೀಯ ಶಿಕ್ಷಣ ನೀತಿಗೆ ಪದವಿ ಕಾಲೇಜುಗಳಿಂದ ಉತ್ತಮ ಬೆಂಬಲ: ಉನ್ನತ ಶಿಕ್ಷಣ ಸಚಿವರು