Publish Date: Fri, 06 Oct 2017 (17:25 IST)
Updated Date: Fri, 06 Oct 2017 (17:28 IST)
ಬಿಜೆಪಿ ಮಹಿಳಾ ಮೋರ್ಚಾ ಬಾಗಿನದ ನೆಪದಲ್ಲಿ ಮತದಾರರನ್ನು ಸೆಳೆಯಲು ಮಹಿಳಾ ಮತದಾರರಿಗೆ ಸೀರೆ ಹಂಚಿಕೆ ಪಾಲಿಟಿಕ್ಸ್ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.
ಹಾಸನದಲ್ಲಿ ಬಿಜೆಪಿಯಿಂದ ಮಹಿಳಾ ಮತದಾರರಿಗೆ ಸೀರೆ ಭಾಗ್ಯ ದೊರೆತಿದ್ದು, ಸೀರೆ ತೊಗೊಂಡು ಬಿಜೆಪಿಗೆ ವೋಟ್ ಹಾಕಿ ಎಂದು ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಮತದಾರರ ಓಲೈಕೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಮುಂದಿನ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ಬಿಜೆಪಿ ಮಹಿಳಾ ಮೋರ್ಚಾ ಬಾಗಿನದ ನೆಪದಲ್ಲಿ ಸೀರೆ ಹಂಚಿಕೆ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ಚುನಾವಣೆಗೆ ಹಲವು ತಿಂಗಳುಗಳು ಬಾಕಿಯಿದ್ದರೂ ರಾಜಕೀಯ ಪಕ್ಷಗಳು ಈಗಾಗಲೇ ಮತದಾರರ ಓಲೈಕೆಗೆ ಮುಂದಾಗಿರುವುದು ನೋಡಿದಲ್ಲಿ ಮುಂಬರುವ ದಿನಗಳಲ್ಲಿ ಮತ್ತಷ್ಟು ಗರಿಗೆದರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.