Publish Date: Tue, 22 Sep 2015 (14:50 IST)
Updated Date: Tue, 22 Sep 2015 (14:52 IST)
ಕಾಂಗ್ರೆಸ್‌ನ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಸ್ಟ್ಯಾಂಪ್‌ನ್ನು ಕೇಂದ್ರ ಸರ್ಕಾರ ಬದಲಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಇಂದು ಪ್ರತಿಕ್ರಿಯಿಸಿದ್ದು, ಅವರು ಕೇವಲ ಸ್ಟ್ಯಾಂಪ್ ಮಾತ್ರವೇ ಬದಲಿಸಬಹುದು. ಆದರೆ ಇತಿಹಾಸವನ್ನು ಬದಲಿಸಲು ಸಾಧ್ಯವೇ ಎಓಂದು ಪ್ರಶ್ನಿಸಿದ್ದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಮಹಿಳೆಯರು ಯಾವ ಉಡುಗೆ ತೊಡಬೇಕು, ಎಷ್ಟು ಸಮಯ ಕೆಲಸ ನಿರ್ವಹಿಸಬೇಕು ಎಂಬ ಬಗ್ಗೆ ಮಾತ್ರ ಚಿಂತಿಸುತ್ತಾರೆ. ಅದನ್ನು ಬಿಟ್ಟು ಮಹಿಳೆಯ ಸಬರಲೀಕಱಣಕ್ಕಾಗಿ ಶ್ರಮಿಸಲಿ ಎಂದು ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ರಾಷ್ಟ್ರದ ಮಹಿಳೆಯ ಅಭಿವೃದ್ಧಿಯನ್ನು ಕಾಂಗ್ರೆಸ್ ಸಮರ್ಪಕವಾಗಿ ಮಾಡುತ್ತಿದೆ ಎಂದರು.
ಇದೇ ವೇಳೆ, ಅಂಚೆಕಚೇರಿಯಲ್ಲಿ ಜಾರಿಗೊಳಿಸಲಾಗಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಸ್ಟ್ಯಾಂಪ್‌ನ್ನು ಬಿಜೆಪಿ ನೇತೃತ್ವದ ಇಂದಿನ ಕೇಂದ್ರ ಸರ್ಕಾರ ನಿಷೇಧಗೊಳಿಸುವ ಮೂಲಕ ರಾಜಕೀಯ ನಡೆಸುತ್ತಿದೆ. ಅವರು ಸ್ಟ್ಯಾಂಪನ್ನು ಮಾತ್ರವೇ ನಿಷೇಧಿಸಬಹುದು. ಆದರೆ ಅವರ ಇತಿಹಾಸವನ್ನು ಅಳಿಸಲು ಸಾಧ್ಯವಾದೀತೇ ಎಂದು ಗುಡುಗಿದರು.