Publish Date: Wed, 03 Jan 2024 (19:23 IST)
Updated Date: Wed, 03 Jan 2024 (18:51 IST)
ಮಹಿಳೆಯರನ್ನು ಹಿಂಬಾಲಿಸುವುದು, ನಿಂದಿಸುವುದು ಮತ್ತು ದಬ್ಬುವುದನ್ನು ಕಿರಿಕಿರಿ ಉಂಟು ಮಾಡುವ ಕೃತ್ಯಗಳು ಎಂದು ಪರಿಗಣಿಸಬಹುದೇ ಹೊರತು, ಇವು ಐಪಿಸಿ ಸೆಕ್ಷನ್ 354 ಅಡಿಯಲ್ಲಿ ಮಾನಭಂಗ ಅಪರಾಧವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಹೇಳಿದೆ.ಪ್ರಕರಣವೊಂದರ ವಿಚಾರಣೆಯ ವೇಳೆ ನ್ಯಾಯಾದೀಶರಾದ ಅನಿಲ್ ಪನ್ಸಾರೆ ಅವರು ಈ ಆದೇಶ ಹೊರಡಿಸಿದ್ದಾರೆ.