Select Your Language

Notifications

webdunia
webdunia
webdunia
webdunia

ಇಂದು ಮಧ್ಯಾಹ್ನ 3:30ಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಇಂದು ಮಧ್ಯಾಹ್ನ 3:30ಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ
ಬೆಂಗಳೂರು , ಸೋಮವಾರ, 9 ಆಗಸ್ಟ್ 2021 (12:12 IST)
ಬೆಂಗಳೂರು, ಆ. (09): ಮೂರು ವಾರಗಳ ಹಿಂದೆ ನಡೆಸಲಾಗಿದ್ದ ರಾಜ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. 8.71 ಲಕ್ಷ ವಿದ್ಯಾರ್ಥಿಗಳ ಹಣೆಬರಹ ತಿಳಿಯಲಿದೆ. ಇಂದು ಮಧ್ಯಾಹ್ನ ಮತ್ತು ಸಂಜೆಯ ಒಳಗೆ ಫಲಿತಾಂಶ ಅಧಿಕೃತವಾಗಿ ಘೋಷಣೆಯಾಗಲಿದೆ. ನೂತನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಸುದ್ದಿಗೋಷ್ಠಿ ಕರೆದು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.

ರಾಜ್ಯ 10ನೇ ತರಗತಿ ಫಲಿತಾಂಶವನ್ನು ವೀಕ್ಷಿಸಲು ನೀವು ನ್ಯೂಸ್18 ಕನ್ನಡ ವೆಬ್ ಸೈಟ್ ಫಾಲೋ ಮಾಡಬಹುದು. ನೇರವಾಗಿ ಫಲಿತಾಂಶವನ್ನು ಏSಇಇಃ.ಏಂಖ.ಓIಅ.Iಓ ಅಥವಾ ಏಂಖಖಇSUಐಖಿS.ಓIಅ.Iಓ ವೆಬ್ ಸೈಟ್ಗಳಲ್ಲಿ ಪಡೆಯಬಹುದು. ಇಂದು ಸಂಜೆಯೇ ಈ ಜಾಲತಾಣಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ಜುಲೈ 19 ಮತ್ತು 22ರಂದು ಎರಡೇ ದಿನದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳನ್ನ ನಡೆಸಲಾಗಿತ್ತು. ಒಟ್ಟು 8.71 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಜುಲೈ 19ರಂದು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಪರೀಕ್ಷೆಯಾಗಿತ್ತು. ಜುಲೈ 22ರಂದು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷಾ ವಿಷಯಗಳ ಪರೀಕ್ಷೆಗಳು ನಡೆದಿದ್ದವು. ಒಂದೇ ದಿನದಲ್ಲಿ ಮೂರು ವಿಷಯಗಳಿಗೆ ಪರೀಕ್ಷೆ ಇದ್ದರಿಂದ ಪ್ರತೀ ಪ್ರಶ್ನೆಪತ್ರಿಕೆಯೂ ಬಹು ಆಯ್ಕೆ ಉತ್ತರಗಳೊಂದಿಗೆ (ಒuಟಣi ಛಿhoiಛಿe ಚಿಟಿsತಿeಡಿs) 40 ಅಂಕಗಳನ್ನ ಹೊಂದಿತ್ತು. ಮೌಲ್ಯಮಾಪನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಫಲಿತಾಂಶ ಪ್ರಕಟಣೆಗೆ ಸಕಲ ತಯಾರಿ ಮುಗಿದಿದೆ. ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಆಗಸ್ಟ್ 10ರೊಳಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದ್ದರು. ಅದರಂತೆಯೇ ಇಂದು ಆಗಸ್ಟ್ 9ರಂದು ರಿಸಲ್ಟ್ ಅನೌನ್ಸ್ ಆಗುತ್ತಿದೆ. ಮಾಜಿ ಸಚಿವ ಸುರೇಶ್ ಕುಮಾರ್ ನಿನ್ನೆ ತಮ್ಮ ಫೇಸ್ಬುಕ್ನಲ್ಲಿ ಇದೇ ವಿಚಾರವನ್ನು ಹಂಚಿಕೊಂಡು ಸಮಾಧಾನ ವ್ಯಕ್ತಪಡಿಸಿದ್ದರು.
ಈ ಜಾಲತಾಣಗಳಲ್ಲಿ ಫಲಿತಾಂಶ ವೀಕ್ಷಿಸಲು ಮೊದಲು ಆ ಒಂದು ವೆಬ್ಸೈಟ್ನ ಹೋಂ ಪೇಜ್ಗೆ ಹೋದರೆ ಅಲ್ಲಿ ಎಸ್ಸೆಸ್ಸೆಲ್ಸಿ ರಿಸಲ್ಟ್ಸ್ ಲಿಂಕ್ ಕಾಣುತ್ತದೆ. ಅದನ್ನ ಕ್ಲಿಕ್ ಮಾಡಿ ಅಭ್ಯರ್ಥಿಯ ರೋಲ್ ನಂಬರ್, ಹಾಲ್ ಟಿಕೆಟ್ ಮಾಹಿತಿ ನೀಡಿದರೆ ಫಲಿತಾಂಶ ಸಿಗುತ್ತದೆ. ಇದನ್ನ ನೀವು ಪಿಡಿಎಫ್ ಫಾರ್ಮ್ಯಾಟ್ನಲ್ಲಿ ಡೌನ್ಲೋಡ್ ಮಾಡಿ ಪ್ರಿಂಟ್ ಕೂಡ ಪಡೆಯಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಪ್ಲಾಸ್ಟಿಕ್ಕಿಂದ ತಯಾರಿಸಿದ ರಾಷ್ಟ್ರಧ್ವಜ ಬಳಸಬೇಡಿ: ರಾಜ್ಯಗಳಿಗೆ ಸೂಚನೆ!