Select Your Language

Notifications

webdunia
webdunia
webdunia
webdunia

ಮೋದಿಗೆ ನನ್ನ ಕಂಡ್ರೆ ಭಯ: ಸಿಎಂ ಹೇಳಿಕೆಗೆ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ

ಮೋದಿಗೆ ನನ್ನ ಕಂಡ್ರೆ ಭಯ: ಸಿಎಂ ಹೇಳಿಕೆಗೆ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ
ಮೈಸೂರು , ಶನಿವಾರ, 4 ನವೆಂಬರ್ 2017 (13:20 IST)
ಪ್ರಧಾನಿ ಮೋದಿಗೆ ನನ್ನ ಕಂಡ್ರ ಭಯ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್, ಇದನ್ನು ಜೋಕ್ ಅನ್ನಬೇಕೋ ಏನು ಅನ್ನಬೇಕೋ ಗೊತ್ತಾಗುತ್ತಿಲ್ಲ. ಇದನ್ನು ಹೇಳೋದಕ್ಕೆ ಪದಗಳೇ ಸಿಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೋದಿ ಹಂಬಲ್ ಆಗಿ ನಾನು ಟೀ ಮಾರುತ್ತಿದ್ದೆ ಎಂದು ಹೇಳುತ್ತಾರೆ. ಸಿಎಂ ಸಿದ್ದರಾಮಯ್ಯ ಏನು ಹೇಳ್ತಾರೆ? ಸಸ್ಯಹಾರಿಗಳಿಗಾಗಿ ಇಂದಿರಾ ಕ್ಯಾಂಟಿನ್ ಆರಂಭಿಸಿದ್ದಾರೆ. ಸಿಎಂ ಮಾಂಸ ಪ್ರಿಯರಾಗಿದ್ದರಿಂದ ಮುಂಬರುವ ದಿನಗಳಲ್ಲಿ  ಮಾಂಸಹಾರ ಕ್ಯಾಂಟಿನ್ ಆರಂಭಿಸುತ್ತಾರೆ ಕಾದು ನೋಡಿ ಎಂದು ಕಿಡಿಕಾರಿದ್ದಾರೆ.
 
ಕಾಂಗ್ರೆಸ್ ನಾಯಕರ ಜನ್ಮ ಜಾಲಾಡಿದ ಪ್ರಸಾದ್, ಮಲ್ಲಿಕಾರ್ಜುನ್ ಖರ್ಗೆ ತಮ್ಮ ಮಗನಿಗಾಗಿ ನೈತಿಕತೆಯನ್ನು ಬಿಟ್ಟಿದ್ದಾರೆ. ಜಿ. ಪರಮೇಶ್ವರ್ ಹಣವನ್ನು ನೀಡಿ, ಶಾಸಕ,ಸಚಿವ ಮತ್ತು ಕೆಪಿಸಿಸಿ ಅಧ್ಯಕ್ಷಸ್ಥಾನವನ್ನು ಪಡೆದಿದ್ದಾರೆ ಎಂದು ಆರೋಪಿಸಿದರು.
 
ಪರಮೇಶ್ವರ್ ಹೋರಾಟ ಹಿನ್ನೆಲೆಯಿಂದ ಬಾರದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅವರನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಕೇವಲ ನಾಮಕವಾಸ್ತೆ ಕೆಪಿಸಿಸಿ ಅಧ್ಯಕ್ಷರಾಗಿ ಕೂರಿಸಿದ್ದಾರೆ ಎಂದು ಟಾಂಗ್ ನೀಡಿದರು.
 
ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ ಅಂದರೆ ಹುಚ್ಚ ಅಂಜನೇಯ ಅಂತ. ಅಂಜನೇಯ ಸಚಿವರಾಗಿ ಸಮಜಾ ಸೇವೆ ಮಾಡುತ್ತಿದ್ದಾನೆಯೇ ಸಿಎಂ ಸೇವೆ ಮಾಡುತ್ತಿದ್ದಾನೆಯೇ ಎಂದು ಬಿಜೆಪಿ ಮುಖಂಡ ವಿ.ಶ್ರೀನಿವಾಸ್‌ಪ್ರಸಾದ್ ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಐಎಎಸ್ ಅಧಿಕಾರಿಯಿಂದ 1 ಕೋಟಿ ಹಣ ಸುಲಿಗೆಗೈದ ನಟಿಯ ಬಂಧನ