Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯನವರಿಂದ ದಲಿತ ನಾಯಕತ್ವ ಹತ್ತಿಕ್ಕುವ ಕುತಂತ್ರ: ಶ್ರೀನಿವಾಸ್ ಪ್ರಸಾದ್

ಸಿದ್ದರಾಮಯ್ಯ
ನಂಜನಗೂಡು , ಗುರುವಾರ, 3 ನವೆಂಬರ್ 2016 (15:33 IST)
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮೇಲೆ ಮುನಿಸಿಕೊಂಡು ಕಾಂಗ್ರೆಸ್ ತೊರೆದಿರುವ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ಸಿಎಂ ಸಿದ್ದರಾಮಯ್ಯನವರ ಮೇಲೆ ಕಿಡಿಕಾರುವುದನ್ನು ಮುಂದುವರೆಸಿದ್ದಾರೆ. ಸಿದ್ದರಾಮಯ್ಯ ದಲಿತ ನಾಯಕತ್ವವನ್ನು ಹತ್ತಿಕ್ಕುವ ಕುತಂತ್ರ ಮಾಡುತ್ತಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. 
ಸಿದ್ದರಾಮಯ್ಯ ದಲಿತ ವಿರೋಧಿ. ಕಳೆದ ವಿಧಾನಸಭಾ ಚುನಾವಣೆ ಬಳಿಕ ತಮ್ಮ ವಿರುದ್ಧ ಹೈ ಕಮಾಂಡ್‌ಗೆ ದೂರು ನೀಡಿದ್ದಕ್ಕೆ ಕೋಪಗೊಂಡು ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸಿ ಅಸಹಾಯಕರಾಗಿ ಮಾಡಿದ್ದರು. ಪ್ರಿಯಾಂಕ್ ಖರ್ಗೆ ಅವರನ್ನು ಸಚಿವರನ್ನಾಗಿಸಿ ಮಲ್ಲಿಕಾರ್ಜುನ್ ಖರ್ಗೆ ಬಾಯ್ಮುಚ್ಚಿಸಿದರು. ಈಗ ನನ್ನನ್ನು ಅವಮಾನಿಸುವ ಮೂಲಕ ದಲಿತ ನಾಯಕತ್ವವನ್ನು ದಮನಿಸುವ ಕುತಂತ್ರದಲ್ಲಿ ತೊಡಗಿದ್ದಾರೆ ಎಂದು ನಂಜನಗೂಡಿನ ಮಾಜಿ ಶಾಸಕ ಪ್ರಸಾದ್ ಕಿಡಿಕಾರಿದ್ದಾರೆ. 
 
ನವೆಂಬರ್ 8 ರಂದು ನಂಜನಗೂಡಿನಲ್ಲಿ ಸಮಾವೇಶ ನಡೆಸಿ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾದ ಅಂಶಗಳನ್ನು ಜನರ ಮುಂದಿಡುತ್ತೇನೆ ಮತ್ತವರಲ್ಲಿ ಕ್ಷಮೆಯಾಚಿಸುತ್ತೇನೆ. ಈ ಸಮಾವೇಶದ ನಂತರ ನನ್ನ ಮುಂದಿನ ರಾಜಕೀಯ ನಡೆಯನ್ನು ತೀರ್ಮಾನಿಸುತ್ತೇನೆ ಮಾಜಿ ಸಚಿವ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಪತಿ ಕೆಟ್ಟವನು, ಯುವತಿಯರ ಅಶ್ಲೀಲ ವಿಡಿಯೋ ತೆಗಿತಾನೆ: ಪೊಲೀಸ್‌ಗೆ ಪತ್ನಿ ದೂರು