Select Your Language

Notifications

webdunia
webdunia
webdunia
webdunia

ಶ್ರೀನಿವಾಸ್‌ಪ್ರಸಾದ್ ಬಿಜೆಪಿ ಸೇರ್ಪಡೆ ಸಂತಸದ ಸಂಗತಿ: ಜಗದೀಶ್ ಶೆಟ್ಟರ್

ಶ್ರೀನಿವಾಸ್ ಪ್ರಸಾದ್
ಹುಬ್ಬಳ್ಳಿ , ಮಂಗಳವಾರ, 1 ನವೆಂಬರ್ 2016 (14:09 IST)
ಮಾಜಿ ಸಚಿವ ಹಿರಿಯ ಮುಖಂಡ ಶ್ರೀನಿವಾಸ್ ಪ್ರಸಾದ್ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದು ಸಂತಸದ ವಿಷಯವಾಗಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
 
ಕಾಂಗ್ರೆಸ್ ಪಕ್ಷದಲ್ಲಿ ದಲಿತರಿಗೆ, ಹಿಂದುಳಿದವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ, ಸಂಪೂರ್ಣ ಜೀವನವನ್ನೇ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಮುಡುಪಾಗಿಟ್ಟ ಪ್ರಸಾದ್ ಅವರನ್ನು ತುಳಿಯಲಾಯಿತು. ಒಂದು ಮಾತನ್ನು ಹೇಳದೇ ಸಚಿವ ಸ್ಥಾನವನ್ನು ಕಿತ್ತುಕೊಂಡು ಅವಮಾನಿಸಿದರು ಎಂದು ತಿಳಿಸಿದ್ದಾರೆ.
 
ಬಿಜೆಪಿ ಪಕ್ಷದಲ್ಲಿ ಸರ್ವರಿಗೆ ಸಮಪಾಲು ಸಮಬಾಳು ಎನ್ನುವ ಅಂತರಿಕ ಪ್ರಜಾಪ್ರಭುತ್ವವಿದೆ. ಮೇಲ್ಜಾತಿಯವರಿಗೆ ಸಿಗುವ ಸ್ಥಾನಗಳು ದಲಿತರಿಗೆ ಕೂಡಾ ದೊರೆಯತ್ತವೆ. ಆದ್ದರಿಂದ, ಅನೇಕ ದಲಿತ ಮುಖಂಡರು ಬಿಜೆಪಿ ಸೇರ್ಪಡೆಗೆ ತುದಿಗಾಲ ಮೇಲೆ ನಿಂತಿದ್ದಾರೆ ಎಂದರು.
 
ಮುಂಬರುವ ದಿನಗಳಲ್ಲಿ ಮತ್ತಷ್ಟು ಇತರ ಪಕ್ಷಗಳ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಮುಂದಿನ ಬಾರಿ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ನಟ ಕಮಲ್ ಹಾಸನ್ ನಟಿ ಗೌತಮಿ ಸಂಬಂಧ ಅಂತ್ಯ