Publish Date: Tue, 02 May 2017 (15:44 IST)
Updated Date: Tue, 02 May 2017 (15:51 IST)
ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ನಡುವಿನ ಬಹಿರಂಗ ಜಗಳ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಶ್ವರಪ್ಪ ಬಣಕ್ಕೆ ಟಾಂಗ್ ಕೊಡಲು ವಿ. ಶ್ರೀನಿವಾಸ್ ಪ್ರಸಾದ್ ಅವರನ್ನ ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಯಡಿಯೂರಪ್ಪ ಆದೇಶಿಸಿದ್ದಾರೆ.
ನಂಜನಗೂಡು ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷ ಸೋತಿದ್ದರೂ ಶ್ರೀನಿವಾಸ್ ಪ್ರಸಾದ್ ಒಂದಷ್ಟು ಮತದಾರರನ್ನ ಹಿಡಿದಿಟ್ಟುಕೊಳ್ಳುವಲ್ಲಿ ಶ್ರೀನಿವಾಸ್ ಪ್ರಸಾದ್ ಯಶಸ್ವಿಯಾಗಿದ್ದರು. ಜೊತೆಗೆ ದಲಿತ ನಾಯಕನಿಗೆ ಪಟ್ಟ ಕಟ್ಟುವ ಮೂಲಕ ಭಿನ್ನಮತೀಯರ ವಿರುದ್ಧ ಯಡಿಯೂರಪ್ಪ aಸ್ತ್ರ ಪ್ರಯೋಗಿಸಿದ್ದಾರೆ.
ಇತ್ತ, ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮುರಳೀಧರ್ ರಾವ್ ವರದಿ ಬಗ್ಗೆ ಉತ್ತರಿಸಲು ನಿರಾಕರಿಸಿದ್ದಾರೆ. ಇತ್ತ, ರಾಜ್ಯ ಬಿಜೆಪಿ ಒಳಜಗಳಗಳ ಬಗ್ಗೆ ಮುರಳೀಧರ್ ರಾವ್ ವರದಿ ಸಲ್ಲಿಸಿದ್ದು, ಅಮಿತ್ ಶಾ ನಿರ್ಧಾರ ಕುತೂಹಲ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ