Publish Date: Fri, 08 Jul 2022 (19:58 IST)
Updated Date: Fri, 08 Jul 2022 (20:02 IST)
ಬೆಂಗಳೂರಿನ ಗಾಂಧಿನಗರದಲ್ಲಿರುವ ಪ್ರಾಚೀನ ದೇವಾಲಯವೆಂದೇ ಪ್ರಸಿದ್ದಿಯಾಗಿರುವ ಅಣ್ಣಮ್ಮ ದೇವಿ ದೇವಾಲಯದಲ್ಲಿ ಇಂದು ಆಷಾಡ ಮಾಸದ ಎರಡನೆ ಶುಕ್ರವಾರವಾಗಿರುವ ಕಾರಣ ದೇವಿಗೆ ಅಲಂಕಾರ ದೊಂದಿಗೆ ವಿಶೇಷ ಪೂಜೆ ಯನ್ನು ಸಲ್ಲಿಸಲಾಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರದಿದ್ದು, ಕೊವಿಡ್ ನಿಯಮವನ್ನು ಪಾಲಿಸಿ, ಭಕ್ತಾದಿಗಳು ಅಣ್ಣಮ್ಮ ದೇವಿಯ ದರ್ಶನವನ್ನು ಪಡೆದರು. ಇನ್ನು ದೇವಸ್ಥಾನದ ಪ್ರಧಾನ ಅರ್ಚಕರು ಜಗನ್ಮಾತೆ ಅಣ್ಣಮ್ಮ ದೇವಿಯ ಮಹಿಮೆಯ ಬಗ್ಗೆ ತಿಳಿಸಿದರು.