Publish Date: Tue, 20 Dec 2016 (12:46 IST)
Updated Date: Wed, 21 Dec 2016 (12:28 IST)
ಸದ್ಯದಲ್ಲಿಯೇ ರಾಜ್ಯ ಸರಕಾರದ ಎಂಎಲ್‌ಸಿ ಹಾಗೂ ಸಚಿವರ ಬಣ್ಣ ಬಯಲಾಗಲಿದೆ. ನಾನು ಭವಿಷ್ಯ ನುಡಿಯುತ್ತಿಲ್ಲ. ಬದಲಿಗೆ ಇನ್ನೆರೆಡು ದಿನ ಕಾದು ನೋಡಿ. ಇದೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯರ ಬುಡಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರುವುದು ಖಚಿತ. ನಂಜನಗೂಡ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿಯಾಗುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುನಿಲ್ ಬೋಸ್ ಸ್ಪರ್ಧಿಸಲ್ಲ...
ನಂಜನಗೂಡ ಉಪಚುನಾವಣೆಯಲ್ಲಿ ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಸ್ಪರ್ಧಿಸಲ್ಲ. ಅದು ಏಕೆ ಎಂದು ನಾನು ಹೇಳಲ್ಲ, ಕಾದು ನೋಡಿ ಎಂದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ.
ರಾಹುಲ್‌ಗೆ ಟಾಂಗ್ ನೀಡಿದ ಬಿಎಸ್‌ವೈ....
ಲೋಕಸಭೆಯಲ್ಲಿ ಮಾತನಾಡಿದರೆ ಭೂಕಂಪವಾಗುತ್ತದೆ ಎಂದು ಹೇಳಿಕೆ ನೀಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮನೆಯಲ್ಲಿ ಸದ್ಯದಲ್ಲಿಯೇ ಭೂಕಂಪವಾಗಲಿದೆ. ಅದು ಯಾವ ಭೂಕಂಪ ಎಂದು ಸದ್ಯದಲ್ಲಿಯೇ ತಿಳಿಯುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಾಂಬ್ ಸಿಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ