ಬೆಂಗಳೂರು:ಮಗುವನ್ನು ಕಾನೂನು ಬಾಹಿರವಾಗಿ ಅವರು ದತ್ತು ಪಡೆದ ಆರೋಪ ಕೇಳಿ ಬಂದಿತ್ತು. ಹೀಗಾಗಿ ಸೋನು ಶ್ರೀನಿವಾಸ್ ಗೌಡ ಅವರು ಇತ್ತೀಚೆಗೆ ಅರೆಸ್ಟ್ ಆದರು. ಆ ಬಳಿಕ ಅವರನ್ನು ಬಂಧಿಸಲಾಯಿತು. ಯಾವುದೇ ಕಾನೂನಿನ ನಿಯಮ ಪಾಲಿಸದೆ ಅವರು ದತ್ತು ತೆಗೆದುಕೊಂಡಿದ್ದರು ಎನ್ನಲಾಗಿದೆ.
ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಟಿಕ್ ಟಾಕ್ ಹಾಗೂ ರೀಲ್ಸ್ ಮಾಡಿ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಹೀಗಾಗಿ, ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈಗ ಬಾಲಕಿಯ ಪಾಲಕರು ನೀಡಿದ ಹೇಳಿಕೆಯಿಂದ ಸೋನು ಶ್ರೀನಿವಾಸ್ ಗೌಡ ಕೊಂಚ ನಿಟ್ಟುಸಿರು ಬಿಡುವಂತೆ ಆಗಿದೆ. ನಾವು ಮಗುವನ್ನು ಮಾರಿಲ್ಲ ಎಂದು ಪಾಲಕರು ಹೇಳಿಕೆ ನೀಡಿದ್ದಾರೆ.
ಮಗುವನ್ನು ಕಾನೂನು ಬಾಹಿರವಾಗಿ ಅವರು ದತ್ತು ಪಡೆದ ಆರೋಪ ಕೇಳಿ ಬಂದಿತ್ತು. ಹೀಗಾಗಿ ಸೋನು ಶ್ರೀನಿವಾಸ್ ಗೌಡ ಅವರು ಇತ್ತೀಚೆಗೆ ಅರೆಸ್ಟ್ ಆದರು. ಆ ಬಳಿಕ ಅವರನ್ನು ಬಂಧಿಸಲಾಯಿತು. ಯಾವುದೇ ಕಾನೂನಿನ ನಿಯಮ ಪಾಲಿಸದೆ ಅವರು ದತ್ತು ತೆಗೆದುಕೊಂಡಿದ್ದರು ಎನ್ನಲಾಗಿದೆ. ಮೊದಲು ಪೊಲೀಸ್ ಕಸ್ಟಡಿಯಲ್ಲಿ ಇದ್ದ ಸೋನು, ಈಗ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಈಗ ಮಗು ದತ್ತು ಪಡೆದ ಬಗ್ಗೆ ಪೋಷಕರು ಹೇಳಿದ್ದಾರೆ.
ಇತ್ತೀಚೆಗೆ ಬಾಲಕಿಯ ಪೋಷಕರಿಗೆ ಪೊಲೀಸರು ಸಮನ್ಸ್ ನೀಡಿದ್ದರು. ಪೊಲೀಸರು ಎದುರು ಬಾಲಕಿಯ ಪಾಲಕರು ಹಾಜರಾಗಿದ್ದಾರೆ. ಸೋನು ಗೌಡ ಅವರನ್ನು ಮಗು ಹಚ್ಚಿಕೊಂಡಿತ್ತು. ಅನಾರೋಗ್ಯ ಉಂಟಾದಾಗ ಸೋನು ಸೋನು ಅಂತಾ ಕನವರಿಸ್ತಿತ್ತು. ಒಂದೆರಡು ದಿನ ಸೋನು ಜೊತೆ ಇರಲಿ ಅಂತಾ ಕಳಿಸಿದ್ದೆವು. ನಾವು ಮಗುವನ್ನ ಸೋನುಗೆ ಮಾರಾಟ ಮಾಡಿಲ್ಲ ಎಂದು ಬ್ಯಾಡರಹಳ್ಳಿ ಪೊಲೀಸರ ಮುಂದೆ ಮಗು ಪಾಲಕರು ಹೇಳಿಕೆ ನೀಡಿದ್ದಾರೆ.
ಮಗುವಿನ ಪಾಲಕರು ರಾಯಚೂರು ಮೂಲದವರು. ರಾಯಚೂರಿನಲ್ಲಿ ಪೊಲೀಸರು ಸ್ಟೇಟ್ಮೆಂಟ್ ಪಡೆದಿದ್ದಾರೆ. ಪೊಲೀಸರ ಮುಂದೆ ದತ್ತು ನೀಡಿಲ್ಲ ಎಂದು ಕೂಡ ಹೇಳಿದ್ದಾರೆ. ಪೋಷಕರ ಹೇಳಿಕೆ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.<>