Select Your Language

Notifications

webdunia
webdunia
webdunia
webdunia

ಅಸಮಾಧಾನ: ವಿನಯ್ ಸೊರಕೆ ಜೊತೆ ಸೋನಿಯಾ ಮಾತುಕತೆ

ಅಸಮಾಧಾನ
ಬೆಂಗಳೂರು , ಗುರುವಾರ, 23 ಜೂನ್ 2016 (15:29 IST)
ಸಚಿವ ಸ್ಥಾನ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ನಗರಾಭಿವೃದ್ಧಿ ಸಚಿವ ವಿನಯ್ ಸೊರಕೆ ಅವರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.
 
ರಾಜ್ಯ ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಅಸಮಾಧಾನಗೊಂಡಿದ್ದ ಮಾಜಿ ನಗರಾಭಿವೃದ್ಧಿ ಸಚಿವ ವಿನಯ್ ಸೊರಕೆ ಅವರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ದೂರವಾಣಿ ಕರೆ ಮಾಡಿ 10 ನಿಮಿಷದ ಸಮಯದವರೆಗೂ ಚರ್ಚೆ ನಡೆಸಿದ್ದಾರೆ. 
 
ನಾನು ಬಿಲ್ಲವ ಸಮುದಾಯದ ನಾಯಕನಾಗಿ ಹಲವು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಆದರೆ, ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ವಿನಯ್ ಸೊರಕೆ ಅವರು ಸೋನಿಯಾ ಗಾಂಧಿಯವರನ್ನು ಕಾರಣ ಕೇಳಿದ್ದಾರೆ. ಸಚಿವರಿಗೆ ಉತ್ತರಿಸಿರುವ ಸೋನಿಯಾ ಗಾಂಧಿ, ನಾವು ಯಾವ ಸಮುದಾಯದ ನಾಯಕರನ್ನು ಕೈಬಿಡುತ್ತಿಲ್ಲ. ನೀವು ಪಕ್ಷ ಸಂಘಟನೆಯತ್ತ ಗಮನ ನೀಡಿ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪಕ್ಷ ಉಳಿಯಲು ನಾಯಕತ್ವ ಬದಲಾವಣೆ ಅವಶ್ಯ: ಶ್ರೀನಿವಾಸ ಪ್ರಸಾದ್