ಬೆಂಗಳೂರು: ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಯಿದೆ. ಆದರೆ ಇಲ್ಲಿ ಅತ್ತೆ ಬಲಿಯಾಗಿದ್ದಾರೆ.
ಗಂಡನ ಕುಡಿತದ ಚಟದಿಂದ ಬೇಸತ್ತ ಹೆಂಡತಿ ತವರು ಮನೆ ಸೇರಿದ್ದಳು. ಆದರೆ ತವರು ಮನೆಯಿಂದ ಪತ್ನಿಯನ್ನು ಕರೆತರಲು ಬಂದ ಗಂಡ ಜಗಳವಾಡಿದ್ದಾನೆ. ಈ ವೇಳೆ ಅತ್ತೆ ಮೇಲೆ ಕೋಪಗೊಂಡು ಸುತ್ತಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ಅತ್ತೆ ಸಾವನ್ನಪ್ಪಿದ್ದಾಳೆ.
ಕಳೆದ ಮೂರು ವರ್ಷಗಳಿಂದ ತವರು ಮನೆಯಲ್ಲಿದ್ದ ಪತ್ನಿ ವಿಚ್ಛೇದನಕ್ಕೆ ಸಿದ್ಧವಾಗಿದ್ದಳು. ಇದೇ ಆಕ್ರೋಶದಲ್ಲಿ ಕುಡಿದು ಪತ್ನಿಯ ಮನೆಗೆ ಬಂದಿದ್ದ ಗಂಡ ಆಕೆಯನ್ನು ಕೊಲ್ಲಲು ಯೋಜನೆ ಹಾಕಿಕೊಂಡಿದ್ದ. ಆದರೆ ಹೆಂಡತಿಯನ್ನು ಕೊಲ್ಲುವ ಬದಲು ಅತ್ತೆಯನ್ನು ಕೊಂದಿದ್ದಾನೆ. ಇದೀಗ ಆರೋಪಿ ಜೈಲು ಕಂಬಿ ಎಣಿಸುತ್ತಿದ್ದಾನೆ.