Daily Horoscope
✕

ಪ್ರದೀಪ್ ಈಶ್ವರ್‌ ಕೈಗೆ ಯಾರಾದ್ರೂ ಕಬ್ಬಿಣ ಕೊಡಿ: ಸ್ಪೀಕರ್ ಯುಟಿ ಖಾದರ್

Sampriya
ಶುಕ್ರವಾರ, 19 ಜುಲೈ 2024 (18:57 IST)
Photo Courtesy X
ಬೆಂಗಳೂರು: ಸದನದಲ್ಲಿ ಇಂದು ಬಿಜೆಪಿಗರ ವಿರುದ್ಧ ರೊಚ್ಚಿಗೆದ್ದ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ  ಪ್ರದೀಪ್ ಈಶ್ವರ್‌ ಕಂಟ್ರೋಲ್ ಮಾಡಲು ಕಬ್ಬಿಣ ಕೊಡ್ರಿ ಎಂದು ಸ್ಪೀಕರ್ ಯುಟಿ ಖಾದರ್ ಅವರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಧಿವೇಶನದಲ್ಲಿ ಮಾತಿಗೆ ಅವಕಾಶ ಕೋರಿದ ಪ್ರದೀಪ್ ಈಶ್ವರ್ ಅವರು ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡದೆ ಬಿಜೆಪಿ ವಿರುದ್ಧ ಆವೇಷಕ್ಕೆ ಒಳಗಾಗಿ ಆಕ್ರೋಶದ ಮಾತುಗಳನ್ನಾಡಿದ್ದರು. ಈ ವೇಳೆ ಯಾರಾ ಕಂಟ್ರೋಲಿಗೂ ಸಿಗದೆ ಕಿರುಚಾಡಿದ್ದಾರೆ. ಪ್ರದೀಪ್ ಅವರನ್ನು ಕಂಟ್ರೋಲ್‌ಗೆ ತರಲು ಸ್ಪೀಕರ್ ಯುಟಿ ಖಾದರ್ ಅವರು ಪ್ರದೀಪ್‌ ಈಶ್ವರ್ ಕೈಗೆ ಯಾರಾದ್ರೂ ಕಬ್ಬಿಣ ಕೊಡಿ ಎಂದಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ:  ಬಿಜೆಪಿ ವಿರುದ್ಧ ಆಕ್ರೋಶದ ಮಾತುಗಳಾಡುತ್ತಿದ್ದ ಪ್ರದೀಪ್ ಈಶ್ವರ್ ಅವರನ್ನು ಸುಮ್ಮನೇ ಕೂರುವಂತೆ ಸ್ಪೀಕರ್ ಅವರು ಸಾವಧಾನದಿಂದಲೇ ಹೇಳಿದ್ದಾರೆ. ಆದರೆ ಪ್ರದೀಪ್ ಈಶ್ವರ್ ಅದಕ್ಕೆ ಕ್ಯಾರೇ ಎನ್ನಲಿಲ್ಲ. ಈ ವೇಳೆ ಸ್ಪೀಕರ್ ಅವರು ಪ್ರದೀಪ್ ಈಶ್ವರ್, ಕುಳಿತುಕೊಳ್ರೀ, ನಿಮ್ಮ ಕೈಗೆ ಕಬ್ಬಿಣ ಕೊಡ್ಬೇಕಾ ಅಂತ ಗದರಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments