ಸಿಎಂ ಬಸವರಾಜ ಬೊಮ್ಮಾಯಿ ನಾಲ್ಕು ಪೊಲೀಸ್ ಠಾಣೆಗಳ ಉದ್ಘಾಟನೆ ಮಾಡಿದ್ದಾರೆ.ಅಲ್ಲದೇ ನಗರದ ಸಂಚಾರ ದಟ್ಟಣೆಯನ್ನ ಹಲವೆಡೆ ಕೆಲವೇ ದಿನಗಳಲ್ಲಿ ನಿಯಂತ್ರಿಸಿದ ಸ್ಪೆಷಲ್ ಕಮಿಷನರ್ ಸಲೀಂಗೆ ಸಿಎಂ ಅಭಿನಂದಿಸಿದಾರೆ.
ಈ ವೇಳೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಬೆಂಗಳೂರ ವಿಭಿನ್ನ ನಗರ, ಅತಿ ವೇಗವಾಗಿ ಬೆಳವಣಿಗೆ ಕಾಣ್ತಿದೆಮದಿನವೊಂದಕ್ಕೆ ನಗರದಕ್ಕೆ 3 ರಿಂದ 4 ಲಕ್ಷ ಜನರು ಬಂದು ಹೋಗ್ತಾರೆ.5 ಸಾವಿರ ಗಣ್ಯರು, ವಿಜ್ಙಾನಿಗಳು ಸೇರಿದಂತೆ ಇತರೆ ಜನರು ಬಂದು ಹೋಗ್ತಾರೆ.ಒಂದು ನಗರ ಬೃಹತ್ ಮಟ್ಟದಲ್ಲಿ ಔದ್ಯೋಗಿಕವಾಗಿ ಬೆಳವಣಿಗೆ ಕಾಣ್ತಿದೆ.ರಾಜ್ಯದ ಆದಾಯ ಹೆಚ್ಚಲು, ಜನರಿಗೆ ಉದ್ಯೋಗ ಕಲ್ಪಿಸುವುದು ಹಾಗ್ತಿದೆ.ಈ ನಿಟ್ಟಿನಲ್ಲಿ ಒಂದು ನಗರದ ಯೋಜನೆಯ ಕಲ್ಪನೆ, ಗತಿಗೆ ತಕ್ಕಂತೆ ಯೋಜನೆ ರೂಪಿಸುವುದು ಅವಶ್ಯಕ, ಅನಿವಾರ್ಯ.ವಿವಿಧ ದೇಶಗಳಾದ ಟೋಕಿಯೋ, ಶಾಂಘೈ, ಲಂಡನ್ ಸೇರಿದಂತೆ ವಿದೇಶಿ ನಗರಗಳಲ್ಲೂ ಚಾರ ದಟ್ಟಣೆ ಇದೆ.ಪ್ರತಿ ಮನೆಯಲ್ಲೂ ಒಂದೆರಡು ಬೈಕ್, ಎರಡು ಕಾರು ಸಾಮಾನ್ಯವಾಗಿದೆ.ವಸ್ತುಸ್ಥಿತಿ ಇದಾಗಿದ್ದು, ಬೆಂಗಳೂರಿನಲ್ಲಿ ಅತಿವೃಷ್ಟಿ ಆದ್ರೂ ಮಳೆ ಹೆಚ್ಚಾದ್ರು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತೆ.ಬೆಂಗಳೂರಿನಲ್ಲಿ ಫಾರಿನ್ ಇನ್ವೆಸ್ಟ್ ಮೆಂಟ್ ಹೆಚ್ಚಿದೆ, ವಿಜ್ಙಾನ -ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ.ಬೆಂಗಳೂರು ಸಂಚಾರ ಸಮಸ್ಯೆ ಬಗ್ಗೆ ನಿವಾರಣೆಗೆ ಚಿಂತಿಸಿದ್ದೆ ಎಂದು ಸಿಎಂ ಹೇಳಿದ್ರು.
ಬೆಂಗಳೂರು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಸಲೀಂ , ಟ್ರಾಫಿಕ್ ಅಧ್ಯಯನಮಾಡಿ ಪಿಹೆಚ್ ಡಿ ಪಡೆದಿದ್ದಾರೆ.ಸೂಕ್ತ ರೀತಿಯಲ್ಲಿ ಸಂಚಾರ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿದ್ದಾರೆ.ಸೇಫ್ ಸಿಟಿ ಪ್ರಾಜೆಕ್ಟ್ ನ ಕ್ಯಾಮಾರಗಳನ್ನ ಸಂಚಾರ ವಿಭಾಗಕ್ಕೂ ಬಳಸಿಕೊಳ್ಳಲಾಕ್ತಿದೆ.ಸಂಚಾರ ನಿಯಮಗಳನ್ನ ಪಾಲಿಸಬೇಕು.6 ಟ್ರಾಫಿಕ್, 9 ಲಾ ಅಂಡ್ ಆರ್ಡರ್, 5 ಮಹಿಳಾ ಠಾಣೆಗಳನ್ನ ಮುಂಬರುವ ದಿನಗಳಲ್ಲಿ ಪ್ರಾರಂಭಿಸಲಿದ್ದೇವೆ.ಸಚಿವ ಬೈರತಿ ಬಸವರಾಜ್ ಟಿನ್ ಪ್ಯಾಕ್ಟರಿ ಸಂಚಾರ ದಟ್ಟಣೆ ನಿವಾರಣೆಗೆ ಯೋಜನೆ ಮನವಿ ಮಾಡಿದ್ದಾರೆ.ಈ ನಿಟ್ಟಿನಲ್ಲಿ ಬಜೆಟ್ ನಲ್ಲಿ ಕಾರ್ಯಯೋಜನೆ ರೂಪಿಸಿದ್ದು, ಮಂಜೂರಾಗಿದೆ.ಬೆಂಗಳೂರಿನ ವಿವಿಧ ಕಡೆಯಲ್ಲೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಇನ್ನೂ ಕೆಲ ಯೋಜನೆಗಳು ಬರಲಿವೆ ಬರಲಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.