Select Your Language

Notifications

webdunia
webdunia
webdunia
webdunia

ಕೆಲವರು ನನಗೆ ಬಗಣಿಗೂಟ ಇಟ್ಟರು

Some kept a secret for me
bangalore , ಗುರುವಾರ, 18 ಮೇ 2023 (14:30 IST)
ಕೇಂದ್ರ ಗೃಹ ಸಚಿವ ಅಮಿತ್ ಷಾ ವರುಣಾದಲ್ಲಿ ಸೋಮಣ್ಣ ಗೆಲ್ಲಿಸಿ ದೊಡ್ಡ ವ್ಯಕ್ತಿ ಮಾಡುತ್ತೇವೆ ಅಂದರು. ಇದನ್ನು ಕೇಳಿಸಿಕೊಂಡ ಕೆಲವರು ನನಗೆ ಬಗಣಿಗೂಟ ಇಟ್ಟರು ಎಂದು ಮಾಜಿ ಸಚಿವ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚಾಮರಾಜನಗರದ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾಧ್ಯಕ್ಷ ಇವತ್ತಿಂದ ನಿಮ್ಮ ಪೆನ್ನು ಪೇಪರ್ ಕೆಲಸ ಮಾಡಲಿ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕಿತ್ತು ಹಾಕಲಿ ಎಂದು ಚಾಮರಾಜನಗರ ಕ್ಷೇತ್ರ ಸೋಲಿನ ಕುರಿತು ಸೋಮಣ್ಣ ಪರೋಕ್ಷವಾಗಿ ಒಬ್ಬರ ವಿರುದ್ಧ ವಾಗ್ದಾಳಿ ನಡೆಸಿದರು. ಕ್ಷೇತ್ರಕ್ಕೆ ಅವನು ಮೊದಲು ಬಂದಾಗಲೇ ಒಳಕ್ಕೆ ಬಿಡಬಾರದಿತ್ತು. ಮಠಗಳಿಗೆ ಅನುದಾನ ನೀಡಿ ಅದರಲ್ಲೇ ಕಮಿಷನ್ ಪಡೆದ. ನನ್ನ ವಿರುದ್ಧ ಜಾತಿ ಎತ್ತಿಕಟ್ಟಿದ, ನನ್ನ‌ ಮಗ ಇಲ್ಲಿಗೆ ಬರುತ್ತಾನೆ ಎಂದು ಕಥೆ ಕಟ್ಟಿದ‌. ನನ್ನ ವಿರುದ್ಧ ಅಪಪ್ರಚಾರ ಮಾಡಿದ. ಅವನ ಮಾತು ಕೇಳಿಕೊಂಡು ನನ್ನ ವಿರುದ್ಧ ಕೆಲವರು ಕುತಂತ್ರ ಮಾಡಿದ್ರು ಅಂತ ಮಾಜಿ ಸಚಿವ ವಿ. ಸೋಮಣ್ಣ ವಾಗ್ದಾಳಿ ನಡೆಸಿದ್ರು

Share this Story:

Follow Webdunia kannada

ಮುಂದಿನ ಸುದ್ದಿ

ಮಸೀದಿಗೆ ನೀಡಿದ್ದ ಹಣ ವಾಪಾಸ್​​ ಕೇಳಿದ ಕೆಜಿಎಫ್​ ಬಾಬು