Select Your Language

Notifications

webdunia
webdunia
webdunia
webdunia

ಜನಾರ್ದನ ರೆಡ್ಡಿಯನ್ನ ಕೆಣಕಬೇಡಿ_ ಎಚ್`ಡಿಕೆ ಹೇಳಿಕೆಗೆ ಸೋಮಶೇಖರ್ ರೆಡ್ಡಿ ಪ್ರತಿಕ್ರಿಯೆ

reddy brothers
ಬಳ್ಳಾರಿ , ಶನಿವಾರ, 25 ಮಾರ್ಚ್ 2017 (13:37 IST)
ನಿಮ್ಮ ಮೇಲಿನ ಎಲ್ಲ ಪ್ರಕರಣಗಳನ್ನ ರದ್ದು ಮಾಡುತ್ತೇವೆ, ಚುನಾವಣೆಗೆ 500 ಕೋಟಿ ಕೊಡಿ ಎಂದು ಬಿಜೆಪಿ ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ನಡುವೆ ಒಪ್ಪಂದವಾಗಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಜನರೇ ಮೆಚ್ಚಿ ಬಿಜೆಪಿಗೆ ಮತ ನೀಡುತ್ತಿದ್ದಾರೆ. ಹಣ ಬಳಕೆಯ ಪ್ರಶ್ನೆ ಬರುವುದೇ ಇಲ್ಲ. ನನ್ನ ತಮ್ಮ ಜನಾರ್ದನರೆಡ್ಡಿ ನೆಮ್ಮದಿಯಾಗಿದ್ದಾನೆ. ಅವನನ್ನ ಕೆಣಕಬೇಡಿ ಎಂದಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಈ 500 ಕೋಟಿಯ ಬಾಂಬ್ ಸಿಡಿಸಿದ್ದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಎಸ್.ಎಂ.ಕೃಷ್ಣ ಆರೋಪಕ್ಕೆ ತಿರುಗೇಟು ನೀಡಿದ ಖರ್ಗೆ