ನವದೆಹಲಿ : ಜೂನ್ 21ರಂದು ಭಾರತದಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗಲಿದೆ.
ಭಾರತದ ರಾಜಸ್ಥಾನ, ಪಂಜಾಬ್. ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕಂಕಣಾಕೃತಿಯಲ್ಲಿ ಸೂರ್ಯ ಗೋಚರವಾಗಲಿದೆ. ರಾಜ್ಯ ಸೇರಿ ಕೆಲ ಭಾಗದಲ್ಲಿ ಖಂಡಗ್ರಾಸ ಸೂರ್ಯ ಗೋಚರವಾಗಲಿದೆ.
ಬೆಂಗಳೂರಿನಲ್ಲಿ ಬೆಳಿಗ್ಗೆ 10.13ಕ್ಕೆ ಸೂರ್ಯಗ್ರಹಣ ಆರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆ 32 ನಿಮಿಷಕ್ಕೆ ಮೋಕ್ಷವಾಗಲಿದೆ. ಸೂರ್ಯಗ್ರಹಣ ಆರಂಭ, ಅಂತ್ಯದಲ್ಲಿ ವ್ಯತ್ಯಾಸವಾಗಿರುತ್ತದೆ. ರಾಜ್ಯದ ವಿವಿಧ ನಗರಗಳಲ್ಲಿ ವಿವಿಧ ಸಮಯದಲ್ಲಿ ಗೋಚರವಾಗಲಿದೆ ಎನ್ನಲಾಗಿದೆ.