ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಾದಿಯಲ್ಲಿ ಅಡಿಗಡಿಗೂ ವಿಘ್ನಗಳು ಎದುರಾಗುತ್ತಿದ್ದು, ಇಂದು ಸಿಎಂ ನಿವಾಸದಲ್ಲಿ ಹಾವು ಕಾಣಿಸಿಕೊಂಡು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಕೆರೆ ಹಾವು ಕಾಣಿಸಿಕೊಂಡಿದ್ದು, ಉರಗ ತಜ್ಞ ಪ್ರಸಾದ್ ಹಾವು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದ ಸಿಎಂ ಕಾರಿನ ಮೇಲೆ ಅಪಶಕುನದ ಸಂಕೇತವಾಗಿರುವ ಕಾಗೆ ಕುಳಿತು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದೀಗ, ಸಿಎಂ ಅಧಿಕೃತ ನಿವಾಸದಲ್ಲಿ ಕೆರೆ ಹಾವು ಪ್ರತ್ಯಕ್ಷವಾಗಿರುವುದು ಸಿದ್ದರಾಮಯ್ಯನವರಿಗೆ ಸರ್ಪ ಸಂಕಷ್ಟ ಪ್ರಾರಂಭವಾಗಿದೆಯೇ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ