Select Your Language

Notifications

webdunia
webdunia
webdunia
webdunia

ಪ್ರಜ್ವಲ್ ರೇವಣ್ಣ ಹಾಸಿಗೆ ಹೊತ್ತೊಯ್ದ ಎಸ್ಐಟಿ ತಂಡ

Prajwal Revanna

Krishnaveni K

ಹಾಸನ , ಬುಧವಾರ, 29 ಮೇ 2024 (12:53 IST)
ಹಾಸನ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮನೆಯಿಂದ ಅವರ ಹಾಸಿಗೆ, ದಿಂಬು ಇತ್ಯಾದಿ ಸಾಮಗ್ರಿಗಳನ್ನು ಎಸ್ಐಟಿ ತಂಡ ಹೊತ್ತೊಯ್ದಿದೆ.

ಪ್ರಜ್ವಲ್ ರೇವಣ್ಣ ಮೇಲೆ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಮತ್ತು ಅತ್ಯಾಚಾರವೆಸಗಿದ ಆರೋಪ ಹೊರಿಸಲಾಗಿದೆ. ಇದೆಲ್ಲವೂ ಪೆನ್ ಡ್ರೈವ್ ನಲ್ಲಿ ದಾಖಲಾಗಿತ್ತು ಎನ್ನಲಾಗಿದೆ. ಈ ಸಂಬಂಧ ಎಸ್ಐಟಿ ತನಿಖಾ ತಂಡ ಹಾಸನದ ಪ್ರಜ್ವಲ್ ನಿವಾಸಕ್ಕೆ ಬಂದು ತಪಾಸಣೆ ನಡೆಸಿದೆ.

ಇಲ್ಲಿಯೇ ಪ್ರಜ್ವಲ್ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂಬುದು ಆರೋಪ. ಹೀಗಾಗಿ ವಿಧಿ ವಿಜ್ಞಾನ ಪರೀಕ್ಷೆಗಾಗಿ ಪ್ರಜ್ವಲ್ ಬಳಸುತ್ತಿದ್ದ ಹಾಸಿಗೆ, ಬೆಡ್ ಶೀಟ್, ದಿಂಬು ಇತ್ಯಾದಿಗಳನ್ನು ಎಸ್ಐಟಿ ತಂಡ ಹೊತ್ತೊಯ್ದಿದೆ.

ಈ ವೇಳೆ ಹಾಸನ ಪೊಲೀಸರೂ ಎಸ್ಐಟಿ ತಂಡಕ್ಕೆ ಸಹಕರಿಸಿದ್ದಾರೆ. ಪ್ರಜ್ವಲ್ ಶುಕ್ರವಾರ ಬೆಂಗಳೂರಿಗೆ ಬರಲಿದ್ದು, ಅವರು ಬಂದ ತಕ್ಷಣವೇ ಬಂಧಿಸಲು ಎಸ್ಐಟಿ ತಂಡ ಸಜ್ಜಾಗಿದೆ. ಸದ್ಯಕ್ಕೆ ಅವರು ಜರ್ಮನಿಯಲ್ಲಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ: ಕಳೆದ ಎರಡು ಚುನಾವಣೆ ಬಳಿಕ ಮೋದಿ ಹೋದ ಸ್ಥಳಗಳು ಯಾವುವು