ದೇವರಿಗೆ ಬಿಟ್ಟಿದ್ದ ಗೋವಿನ ಕಾಲು ಕಡಿದ ಪಾಪಿಗಳು, ಕ್ರಮಕ್ಕೆ ಒತ್ತಾಯ

Sampriya
ಸೋಮವಾರ, 24 ನವೆಂಬರ್ 2025 (18:41 IST)
ಯಲಬುರ್ಗಾ: ​ದೇವರಿಗೆ ಬಿಟ್ಟಿದ್ದ ಗೋವಿನ ಕಾಲನ್ನು ಪಾಪಿಗಳು ಕೊಡಲಿಯಿಂದ ಕಡಿದು ವಿಕೃತಿ ಮೆರೆದ ಘಟನೆ ತಾಲ್ಲೂಕಿನ ಮಾಟರಂಗಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸಂಬಂಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಗೋವನ್ನು ಮಾಟರಂಗಿ ಗ್ರಾಮದ ಮಾರುತೇಶ್ವರ ದೇವರಿಗೆ ಹದಿನೈದು ವರ್ಷಗಳ ಹಿಂದೆ ಬಿಡಲಾಗಿತ್ತು. ಇನ್ನೂ ಗ್ರಾಮಸ್ಥರು ಇದನ್ನು ಪೂಜನೀಯ ಭಾವನೆಯಿಂದ ಕಾಣುತ್ತಿದ್ದರು. 

ಆದರೆ ರವಿವಾರ ಈ ಗೋವು ಮಾಟರಂಗಿ ಗ್ರಾಮದ ಪಕ್ಕದಲ್ಲಿರುವ ಲಿಂಗನಬಂಡಿ ರಮೇಶ್ ಹಡಪದ ಎನ್ನುವವರ ಜಮೀನಿನಲ್ಲಿ ಮೇಯಲು ಹೋಗಿತ್ತು. ಈ ಸಂದರ್ಭದಲ್ಲಿ ಕೊಡಲಿಯಿಂದ ಗೋವಿನ ಕಾಲನ್ನು ಕಡಿಯಲಾಗಿದೆ.

ಇನ್ನೂ ಭಾರೀ ಆಕ್ರೋಶಕ್ಕೆ ಕಾರಣರಾಗಿರುವ  ಈ ಘಟನೆ ಸಂಬಂಧ ಕ್ರಮಕ್ಕೆ ಒತ್ತಾಯ ವ್ಯಕ್ತವಾಗಿದೆ. ದೇವರ ಹೆಸರಿನಲ್ಲಿ ಬಿಟ್ಟಿದ್ದ ಗೋವಿನ ಕಾಲನ್ನು ಕಡಿದಿರುವ ಆರೋಪವನ್ನು ಜಮೀನಿನ ಮಾಲೀಕರಾದ ಲಿಂಗನಬಂಡಿ ರಮೇಶ್ ಅವರ ಮೇಲೆ ಗ್ರಾಮಸ್ಥರು ಹೊರಿಸಿದ್ದಾರೆ. ​

ದೂರು: ಯಲಬುರ್ಗಾ ಪೋಲಿಸ್ ಠಾಣೆಗೆ ತೆರಳಿ ಗ್ರಾಮಸ್ಥರು ದೂರು ನೀಡಿದ್ದಾರೆ, ದೂರು ನೀಡಲು ಬಂದಾಗ ವಿಳಂಬ ಮಾಡುತ್ತಿದ್ದಾರೆ, ಪ್ರತ್ಯಕ್ಷದರ್ಶಿ ಸಾಕ್ಷಿ ಕೊಡಿ ಎಂದು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಮಾಟರಂಗಿ ಗ್ರಾಮಸ್ಥರು ಪೋಲಿಸರ ವಿರುದ್ದ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಸಚಿವ ಮಧು ಬಂಗಾರಪ್ಪ ಸ್ಫೋಟಕ ಹೇಳಿಕೆ

ಮೊಬೈಲ್ ವಾಲ್ಯೂಮ್ ಕಡಿಮೆ ಮಾಡಿ ಎಂದಿದ್ದಕ್ಕೆ ಮಹಿಳೆಯಿಂದ ಪೆಪ್ಪರ್ ಸ್ಪ್ರೇ, Video

ಬೆಳಗಾವಿ ಅಧಿವೇಶನ, ಬಿಜೆಪಿ ಆರೋಪಕ್ಕೆ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯೆ ಹೀಗಿತ್ತು

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಈ ದಿನದಿಂದ ಹೋರಾಟ ಶುರು

ಇಲ್ಲಿದೆ ಶಿವನಿಂದ ಪ್ರೇರಿತವಾದ ಗಂಡು ಮಗುವಿನ ಕೆಲ ಹೆಸರುಗಳು

ಮುಂದಿನ ಸುದ್ದಿ
Show comments