Select Your Language

Notifications

webdunia
webdunia
webdunia
webdunia

ಬಿಂಗಿ ಹಬ್ಬ ಮುಗಿಸಿ ಸಾವನ್ನಪ್ಪಿದ್ದು ಹೇಗೆ?

ಬಿಂಗಿ ಹಬ್ಬ
ಅಲ್ಲಿ ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದರು. ಆದರೆ ಹಬ್ಬದ ಆಚರಣೆ ಬಳಿಕ ಸ್ನಾನಕ್ಕೆಂದು ಆರು ಜನರು ಕೆರೆಗೆ ಧುಮುಕಿದ್ದರು. ಆದರೆ ವಿಧಿ ಆಟ ಬೇರೆಯೇ ಆಗಿತ್ತು. ಸ್ನಾನ ಮಾಡುವುದಕ್ಕೆ ಅಂತ ಧುಮುಕಿದವರಲ್ಲೊಬ್ಬ ಸಾವನ್ನಪ್ಪಿದ್ದಾನೆ. 
 
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡ್ಕಣಿ ಎಂಬಲ್ಲಿ ಈ ಘಟನೆ ನಡೆದಿದೆ. ಅರಿಶಿನಗೋಡ ಮೂಲದ ಬೇಡ್ಕಣಿಯಲ್ಲಿ ವಾಸವಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತನ ಹೆಸರು ದಾಸ (30) ಎಂದು ಗುರುತಿಸಲಾಗಿದೆ. ಆದರೆ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಬೇಡ್ಕಣಿಯ ಶನೇಶ್ವರ ದೇವಾಲಯದಲ್ಲಿ ಕೆರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಿಂಗಿ ಹಬ್ಬ ಮುಗಿಸಿ ಸ್ನಾನಕ್ಕೆಂದು ಆರೆಂಟು ಜನರು ಕೆರೆಗೆ ಧುಮುಕಿದ್ದರು. ಆದರೆ ಅವರಲ್ಲಿ ದಾಸ ಸಾವನ್ನಪ್ಪಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ಶವ ಹುಡುಕಾಟದಲ್ಲಿ ತೊಡಗಿದ್ದಾರೆ.
 
 
 

Share this Story:

Follow Webdunia kannada

ಮುಂದಿನ ಸುದ್ದಿ

ರೇಷ್ಮೆ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ ಸಚಿವರನ್ನು ತರಾಟೆಗೆ ತೆಗೆದುಕೊಂಡವರಾರು?